


ಡೈಲಿ ವಾರ್ತೆ: 18/ಏಪ್ರಿಲ್/2025


ಹಾತೂರು| ಓಮಿನಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ – ತಾಯಿ, ಮಗ ಸ್ಥಳದಲ್ಲೇ ಸಾವು

ಮಡಿಕೇರಿ: ಓಮಿನಿ ಕಾರು ಹಾಗೂ ಲಾರಿ ನಡುವೆ ಪರಸ್ಪರ ಡಿಕ್ಕಿಯಾದ ಪರಿಣಾಮ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಏ.18 ರಂದು ಶುಕ್ರವಾರ ದಕ್ಷಿಣ ಕೊಡಗಿನ ಹಾತೂರು ಗ್ರಾಮದಲ್ಲಿ ನಡೆದಿದೆ.
ಬಿ.ಶೆಟ್ಟಗೇರಿ ಗ್ರಾಮದ ಅರ್ಚಕ ದಿ.ಪುಂಡರಿಕಾಕ್ಷ ಅವರ ಪತ್ನಿ ಲಲಿತ(70) ಹಾಗೂ ಪುತ್ರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ(42) ಮೃತ ದುರ್ದೈವಿಗಳು.
ಮೈಸೂರಿನತ್ತ ಹೋಗುತ್ತಿದ್ದ ತರಕಾರಿ ಲಾರಿ ಮತ್ತು ಗೋಣಿಕೊಪ್ಪಲಿನಿಂದ ಬಿ.ಶೆಟ್ಟಿಗೇರಿಯತ್ತ ಬರುತ್ತಿದ್ದ ಮಾರುತಿ ಓಮಿನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಓಮಿನಿ ನಜ್ಜುಗುಜ್ಜಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.