ಡೈಲಿ ವಾರ್ತೆ: 21/ಏಪ್ರಿಲ್/2025

ಕ್ರಿಶ್ಚಿಯನ್ ಧರ್ಮ ಗುರು ಪೋಪ್ ಫ್ರಾನ್ಸಿಸ್ ನಿಧನ

ಪೋಪ್ ಫ್ರಾನ್ಸಿಸ್ (88) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವ್ಯಾಟಿಕನ್ ನಗರದ ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ. ಡಿ.17, 1936 ರಂದು ಅರ್ಜೆಂಟೀನಾದಲ್ಲಿ ಜನಿಸಿದ ಇವರು ಮಾರ್ಚ್ 13, 2013 ರಂದು 266ನೇ ಪೋಪ್ ಆಗಿ ಆಯ್ಕೆಯಾಗಿದ್ದರು.

ಅಮೆರಿಕದಿಂದ ಪೋಪ್ ಆಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಇತ್ತೀಚೆಗೆ ಗುಡ್‌ಪ್ರೈಡೆ ದಿನ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ” ಬೆಳಿಗ್ಗೆ 7:35 ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ಭೂಮಿಯನ್ನು ತೊರೆದು ತಮ್ಮ ತಂದೆಯ ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತನ ಮತ್ತು ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು” ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೋಪ್ ನಿಧನದೊಂದಿಗೆ ಇಡೀ ಕ್ರಿಶ್ಚಿಯನ್ ಸಮುದಾಯವು ಶೋಕದಲ್ಲಿ ಮುಳುಗಿದೆ.