



ಡೈಲಿ ವಾರ್ತೆ: 22/ಏಪ್ರಿಲ್/2025


ಬ್ರಹ್ಮಾವರ| ದನ ಅಡ್ಡ ಬಂದು ಸ್ಕೂಟರ್ ಪಲ್ಟಿ: ಸವಾರ ಸಾವು

ಬ್ರಹ್ಮಾವರ : ದನ ಅಡ್ಡ ಬಂದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಸವಾರ ಮೃತಪಟ್ಟ ಘಟನೆ ಉಡುಪಿಯ ಉಳ್ಳೂರು ಗ್ರಾಮದ ಕೊಳಲಗಿರಿ-ಆರೂರು ರಸ್ತೆಯ ಶ್ರೀ ವೀರಾಂಜನೆಯ ಭಜನಾ ಮಂದಿರದ ಬಳಿ ನಡೆದಿದೆ.
ಮೃತರನ್ನು ಮಣಿಪಾಲ ಹೊಟೇಲ್ ಒಂದರ ಮೆನೇಜರ್ ಪ್ರವೀಣ್ ಸಾಲ್ಯಾನ್(44) ಎಂದು ಗುರುತಿಸಲಾಗಿದೆ.
ಮೃತ ಪ್ರವೀಣ್ ಸ್ಕೂಟರ್‌ನಲ್ಲಿ ಮಣಿಪಾಲದಿಂದ ನೀಲಾವರದಲ್ಲಿರುವ ಸಂಬಂಧಿಕರ ಮನೆಯ ಹೋಗುತ್ತಿದ್ದಾಗ ದನವೊಂದು ಒಮ್ಮೇಲೆ ರಸ್ತೆಗೆ ಅಡ್ಡ ಬಂತ್ತೆನ್ನಲಾಗಿದೆ.
ಇದರ ಪರಿಣಾಮ ಪ್ರವೀಣ್ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರವೀಣ್‌ನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಆಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಎ.21ರಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.