



ಡೈಲಿ ವಾರ್ತೆ: 23/ಏಪ್ರಿಲ್/2025


ಕೋಟ| ಮೇ 13 ಬೃಹತ್ ರೈತ ಹೋರಾಟಕ್ಕೆ ಕರೆ

ಕೋಟ: ಹಸಿರು ಸೇನೆ ಕೋಟ ಹದಿನಾಲ್ಕು ಗ್ರಾಮ ರೈತ ಸಂಘಟನೆ ಮೇ 13 ರಂದು ಬೃಹತ್ ರೈತ ಚಳುವಳಿಗೆ ಕರೆ ಕೊಟ್ಟಿದೆ ಸುಲ್ದಪು ಮಡಿವಾಳಸಾಲು ಹೊಳೆ ಹೂಳು ಸಮಸ್ಯೆಯ ಕುರಿತು ಕಳೆದ ಹಲವಾರು ವರ್ಷಗಳಿಂದ ತೆಕ್ಕಟ್ಟೆ ಉಳುತ್ತೂರು ಬೇಳೂರು ಗಿಳಿಯಾರು ಕಾರ್ತಟ್ಟು ಚಿತ್ರಪಾಡಿ ಬನ್ನಾಡಿ ಉಪ್ಲಾಡಿ ಸಾಲಿಗ್ರಾಮ ವ್ಯಾಪ್ತಿಯ ರೈತರು ಕೃತಕ ನೆರೆ ಹಾವಳಿಗೆ ಈಡಾಗುತ್ತಿದ್ದು ಈ ಸಮಸ್ಯೆಯ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಹಾಗೂ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಈ ಭಾಗದ ರೈತ ಪ್ರಮುಖರೆಲ್ಲರೂ ಇಂದು ಕೋಟ ಮಾಲಿಂಗ ಮಹಾ ಮಾಂಗಲ್ಯ ಮಂದಿರದಲ್ಲಿ ಸಭೆ ಸೇರಿ ಹೋರಾಟದ ನಿರ್ಣಯವನ್ನು ಕೈಗೊಳ್ಳಲಾಯಿತು.
ಮೇ 13ನೇ ತಾರೀಖಿನಂದು ಕೋಟ ಬನ್ನಾಡಿ ರಾಜ್ಯ ಹೆದ್ದಾರಿಯ ಮಗ್ಗುಲಲ್ಲಿ 2,000ಕ್ಕೂ ಅಧಿಕ ರೈತರಿಂದ ರಾಜ್ಯಮಟ್ಟದ ರೈತ ನಾಯಕರ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶಕ್ಕೆ ಕರೆ ನೀಡಿದ್ದು ಹಿರಿಯ ಯಾರು ಭರತ್ ಕುಮಾರ್ ಶೆಟ್ಟಿ, ಶಾಮ್ ಸುಂದರ್ ನಾಯಿರಿ, ಪ್ರಶಾಂತ್ ಶೆಟ್ಟಿ ಉಳ್ತೂರು, ಅಜಿತ್ ದೇವಾಡಿಗ ಕೋಟ, ಚಂದ್ರ ಪೂಜಾರಿ ಕದ್ರಿಕಟ್ಟು, ರವೀಂದ್ರ ಐತಾಳ್, ವಸಂತ ಗಿಳಿಯಾರು, ರಾಜಾರಾಮ್ ಶೆಟ್ಟಿ ಗಿಳಿಯಾರು, ಪ್ರಸಾದ್ ಬಿಲ್ಲವ , ಬೇಳೂರು ದಿನೇಶ್ ಶೆಟ್ಟಿ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಸಂತೋಷ ಪೂಜಾರಿ ಕಂಬಳ ಗೆದ್ದೆ, ಲಲಿತಾ ಪೂಜಾರ್ತಿ, ಶೇಖರ್ ಗಿಳಿಯಾರು, ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ಪ್ರಶಾಂತ್ ಶೆಟ್ಟಿ ಉಳ್ತೂರು, ರಾಜು ಪೂಜಾರಿ ಕಾರ್ಕಡ ಭಾಗಿಯಾಗಿದ್ದರು.