



ಡೈಲಿ ವಾರ್ತೆ: 23/ಏಪ್ರಿಲ್/2025


ಕೋಟ:- ಜನತಾ ಸಂಸ್ಥೆಯಲ್ಲಿ ಉದ್ಯೋಗಿ ಸಂಸ್ಥೆ ವತಿಯಿಂದ ಸುರಕ್ಷತಾ ಪರಿಕರಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ

ಜನತಾ ಸಂಸ್ಥೆಯ ಅವರಣದಲ್ಲಿ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಉದ್ಯೋಗಿ ಸುರಕ್ಷತಾ ಉಪಕರಣಗಳ ವಿತರಣಾ ಸಂಸ್ಥೆಯಿಂದ ಸುರಕ್ಷತಾ ಪರಿಕರಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಉದ್ಘಾಟಿಸಿ ಕಾರ್ಖಾನೆಗಳ ಸುರಕ್ಷಿತ ವಾತಾವರಣವೆ ಕಾರ್ಮಿಕನಿಗೆ ಶ್ರೀರಕ್ಷೆ. ಸುರಕ್ಷತೆ ಮೊದಲು ಸಂಸ್ಥೆಯ ಕೆಲಸವಾಗಿದೆ.
ಹಾಗಾಗಿ ಎಲ್ಲರು ಒಂದಾಗಿ ಸುರಕ್ಷಿತ ವಾತಾವರಣವನ್ನು ಕಾರ್ಖಾನೆಯ ಒಳಗೆ ನಿರ್ಮಿಸಲು ಪಣತೋಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಎ ಜಿ ಎಮ್ ಶ್ರೀನಿವಾಸ್ ಕುಂದರ್, ವ್ಯವಸ್ಥಾಪಕ ಮಿಥುನ್ ಕುಮಾರ್, ಸುರಕ್ಷಾತಧಿಕಾರಿ ಕಾರ್ತಿಕ ಆಚಾರ್ಯ ಉಪಸ್ಥಿತರಿದ್ದರು.