ಡೈಲಿ ವಾರ್ತೆ: 26/ಏಪ್ರಿಲ್/2025

ಪ್ರಧಾನಿ ಮೋದಿ, ಸಿಎಂ ಯೋಗಿ ಫೋಟೋ ಎಡಿಟ್ ಮಾಡಿ ಅವಮಾನ: ವ್ಯಕ್ತಿ ಬಂಧನ

ದಾಂಡೇಲಿ: ನಾಯಿಯ ಮುಖಕ್ಕೆ ಪ್ರಧಾನಿ ನರೇಂದ್ರ
ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಹಾಕಲಾದ ಫೋಟೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಪೊಲೀಸರು ಅನಿಸ್ ಹುಲ್ಗರ್ ಎಂಬಾತನನ್ನು ಬಂಧಿಸಿದ್ದಾರೆ. ಎಐಎಂಎಐಎಂ ಮುಖ್ಯಸ್ಥ, ಸಂಸದ, ಅಸಾದುದ್ದೀನ್ ಓವೈಸಿ ನಾಯಿಯನ್ನು ಹಿಡಿದುಕೊಂಡಿರುವ ರೀತಿಯಲ್ಲಿ ಫೋಟೋವನ್ನು ಎಡಿಟ್ ಮಾಡಲಾಗಿದೆ. ನಾಯಿಗಳ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಹಾಕಲಾಗಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.

ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡು ನಗರದ ಸಂಡೆ ಮಾರ್ಕೆಟ್ ಹತ್ತಿರ ಹಣ್ಣು ಹಂಪಲು ವ್ಯಾಪಾರ ಮಾಡುವ ಅನಿಸ್ ಹುಲ್ಗರ್ ಎಂಬಾತನನ್ನು ಬಂಧಿಸಿದ್ದಾರೆ.