ಡೈಲಿ ವಾರ್ತೆ: 10/MAY/2025

ಕಳ್ಳತನ ಆರೋಪ: ಬಾಲಕನಿಗೆ ಚಿತ್ರ ಹಿಂಸೆ ನೀಡಿ, ಆಸಿಡ್ ಹಾಕಿ ಕೊಲೆ ಮಾಡಿದ ಕೀಚಕರು

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಫರ್ನಿಚರ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದ ಬಾಲಕನನ್ನ ಹಿಗ್ಗಾಮುಗ್ಗ ತಳಿಸಿ ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಖಾಲಿ ನಿವೇಶನ ಒಂದರಲ್ಲಿ ಶವ ಎಸೆದು ಯಾರಿಗೂ ಗೊತ್ತಾಗದಂತೆ ಪ್ರಕರಣ ಮೆಚ್ಚಿ ಹಾಕಲು ಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಕೊಲೆಯಾಗಿದ್ದ ಬಾಲಕ ಅನಾಥ ಶವವಾಗಿ ಮೇ 1 ರಂದು ಪತ್ತೆಯಾಗಿದ್ದ. ಕೊಳೆತು ನಾರುತಿದ್ದ ಯುವಕನ ಶವವನ್ನು ಪೊಲೀಸರೇ ಹೂತು ಶವಸಂಸ್ಕಾರ ಮಾಡಿ, ತನಿಖೆ ನಡೆಸುತ್ತಿದ್ದರು. ಹಲ್ಯಾಳ ರಸ್ತೆಯ ಶೇಡ್ ಒಂದರಲ್ಲಿ ಯುವಕನನ್ನ ಹಿಗ್ಗಾಮುಗ್ಗ ತಿಳಿಸಿದ, ಈ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಂದ ಕಲೆ ಹಾಕಿದ ಅಥಣಿ ಪೊಲೀಸ್ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಅಥಣಿ ಪಟ್ಟಣದ ಅಬ್ದುಲಬಾರಿ ಅಬ್ದುಲರಜಾಕ ಮುಲ್ಲಾ (36), ಜುಬೆರಹ್ಮದ ಮಹಮದ್‌ಅಕ್ರಂ ಮೌಲ್ವಿ (34), ಬಿಲಾಲಅಹಮ್ಮದ್ ಮುಕ್ತಾರಅಹಮದ್ ಮೌಲ್ವಿ (25), ಹಜರತಬಿಲಾಲ ಅಹಮ್ಮದಇಸಾಲಿ ನಾಲಬಂದ (28), ಫಯೂಮ ಮುಸಾ ನಾಲಬಂದ್ (27) ಹಾಗೂ ಮಹೇಶ ಸಂಜಯ ಕಾಳೆ (36) ಎಂಬ 6 ಜನ ಆರೋಪಿಗಳು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಅಥಣಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕೇವಲ 16 ರ ಬಾಲಕ ವಿಕಾಸನನ್ನ ಕಳುವು ಮಾಡಿದ ಎಂಬ ವಿಚಾರಕ್ಕೆ ಶೆಡ್ ಒಂದರಲ್ಲಿ ಕಟ್ಟೀಹಾಕಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗಿದೆ. ಇಂತಹ ಜಟಿಲ ಸಮಸ್ಯೆ ಭೇದಿಸಿದ ಅಥಣಿ ಪೊಲೀಸ್ ಇಲಾಖೆ ಪ್ರಶಂಸೆಗೆ ಕಾರಣವಾಗಿದ್ದು, ಇನ್ನು ಕೊಲೆ ತನಿಖೆಯಲ್ಲಿ ಪ್ರಭಾವಿಗಳಿರುವ ಶಂಕೆ ವ್ಯಕ್ತವಾಗಿದೆ.