ಡೈಲಿ ವಾರ್ತೆ: 14/MAY/2025

ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಐನೂರನೇ ರಕ್ತದಾನ ಶಿಬಿರದ ಪ್ರಚಾರ ಜಾಗೃತಿ ಜಾಥ
ಏಕ ಕಾಲಕ್ಕೆ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ 500ನೇ ರಕ್ತದಾನ ಶಿಬಿರದ ಪ್ರಚಾರಾರ್ಥವಾಗಿ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಮೊದಲು ಕಾರ್ಯಕ್ರಮಕ್ಕೆ ಮೆರುಗು ನೀಡುವ ಸಲುವಾಗಿ ರಕ್ತದಾನದ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಕಲ್ಲಡ್ಕದಿಂದ ಹೊರಟ ಜಾಗೃತಿ ಜಾಥ ಮಂಗಳೂರಿನ ರಾಜ ಬೀದಿಯಲ್ಲಿ ಸಂಚರಿಸಿ ಪರಿಸರದ ವಿವಿಧ ಆಸ್ಪತ್ರೆಗಳಲ್ಲಿ ತೆರಳಿ ಉತ್ಸಾಹಿ ಯುವಕರ ತಂಡ ರಕ್ತದಾನ ಮಾಡಿ ಮಾದರಿಯಾದರು.
ಸುಮಾರು ನೂರಕ್ಕೂ ಅಧಿಕ ಯುವಕರು ರಕ್ತದಾನ ಮಾಡಿ ಪರಿಸರದಲ್ಲಿ ತಲೆದೂರುತ್ತಿರುವ ರಕ್ತದಾನದ ಅಭಾವವನ್ನು ಸ್ವಲ್ಪಮಟ್ಟಕ್ಕೆ ನೀಗಿಸುವಲ್ಲಿ ಸಫಲರಾದರು.

ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ದೇಶ ವಿದೇಶಗಳಲ್ಲಿ ಆಯೋಜಿಸುತ್ತಿದ್ದು ಇದರ 500ನೇ ರಕ್ತದಾನ ಶಿಬಿರವು ಮುಂದಿನ ದಿನಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ. ತನ್ನ ಸಮಾಜಮುಖಿ ಸೇವೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ತಮ್ಮ ಸೇವೆಯನ್ನು ಮತ್ತಷ್ಟು ಮುಂದುವರಿಸಿ ಇನ್ನಷ್ಟು ನಾಗರಿಕರಲ್ಲಿ ರಕ್ತದಾನದ ಕುರಿತು ಅರಿವನ್ನು ಮೂಡಿಸಲು ಸಹಕರಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.