



ಡೈಲಿ ವಾರ್ತೆ: 14/MAY/2025


ಯಕ್ಷಗಾನ ಮೇಳದ ಯುವ ಕಲಾವಿದ ರಂಜಿತ ಬನ್ನಾಡಿ ವಿದ್ಯುತ್ ಅಘಾತದಿಂದ ಸಾವು

ಕೋಟ: ಸೂರಲು ಯಕ್ಷಗಾನ ಮೇಳದ ಯುವ ಕಲಾವಿದ ರಂಜಿತ ಬನ್ನಾಡಿ ವಿದ್ಯುತ್ ಅಘಾತದಿಂದ ಸಾವನ್ನಪ್ಪಿದ ಘಟನೆ ಮೇ. 13 ರಂದು ರಾತ್ರಿ ಆಗುಂಬೆ ಯಲ್ಲಿ ಸಂಭವಿಸಿದೆ.
ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನವು ಮಳೆಯಿಂದ ರದ್ದಾದ ಕಾರಣ ಯುವ ಕಲಾವಿದ ತನ್ನ ದ್ವಿಚಕ್ರ ವಾಹನದಲ್ಲಿ ವಾಪಸು ಮನೆಗೆ ಬರುತ್ತಿದ್ದ ವೇಳೆ ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ಯುವ ಕಲಾವಿದ ರಂಜಿತ ಬನ್ನಾಡಿ ಅವರ ಮೇಲೆ ವಿದ್ಯುತ್ ತಂತಿ ಹರಿದು ತೀವ್ರ ಸ್ವರೂಪಕ್ಕೆ ಹೋಗಿತ್ತು.
ಕೂಡಲೇ ಸ್ಥಳಿಯರ ಸಹಕಾದಿಂದ ತುರ್ತುವಾಹನದ ಮೂಲಕ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.
ಸಹ ಸವಾರ ಸ್ರೀವೇಷಧಾರಿ ವಿನೋಧ ರಾಜ್ ಅದೃಷ್ಷವಷಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.