



ಡೈಲಿ ವಾರ್ತೆ: 14/MAY/2025


ಶಿರೂರು| ವಿದ್ಯಾರ್ಥಿಗೆ ಹಲ್ಲೆ ಪ್ರಕರಣ – ಶಿಕ್ಷಕನನ್ನು ವೃತ್ತಿಯಿಂದ ವಜಾಗೊಳಿಸಲು ಎಸ್ಡಿಪಿಐ ಆಗ್ರಹ

ಕುಂದಾಪುರ| ಶಿರೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಶಿಕ್ಷಕರೊಬ್ಬರು ಅಮಾನುಷವಾಗಿ ಹಲ್ಲೆ ನಡೆಸಿರುವ ಹಳೆಯ ಘಟನೆ ವಿಡಿಯೋ ವೈರಲ್ ಆಗುವ ಮೂಲಕ ಇಂದು ಬೆಳಕಿಗೆ ಬಂದಿದೆ.
ಈ ಘಟನೆ ಸುಮಾರು 7 ತಿಂಗಳ ಹಿಂದೆ ನಡೆದಿದ್ದು ಮಕ್ಕಳು ತರಗತಿಯಲ್ಲಿ ನಡೆಸುವ ಸಣ್ಣ ಪುಟ್ಟ ಚೇಷ್ಟೆಯನ್ನೇ ನೆಪವಾಗಿ ಇಟ್ಟುಕೊಂಡು ವಿನಾಯಕ ಕಾರ್ವಿ ಎಂಬ ಶಿಕ್ಷಕ ವಿದ್ಯಾರ್ಥಿಯ ಮೇಲೆ ಅತ್ಯಂತ ಅಮಾನುಷವಾಗಿ ಹಲ್ಲೆಯನ್ನು ನಡೆಸಿದ್ದಾರೆ. ಮಕ್ಕಳಿಗೆ ಮಾನವೀಯತೆಯ, ನೈತಿಕತೆಯ ಮೌಲ್ಯಗಳನ್ನು ಕಲಿಸಿ ಕೊಡಬೇಕಾದ ಶಿಕ್ಷಕರೇ ವಿದ್ಯಾರ್ಥಿ ಮೇಲೆ ಈ ರೀತಿಯ ದೌರ್ಜನ್ಯವೆಸಗಿರುವುದು ಖಂಡನೀಯ. ಮಾನವೀಯತೆ ಹಾಗೂ ಕರುಣೆ ಇಲ್ಲದ ಇಂತವರು ಶಿಕ್ಷಕ ವೃತ್ತಿಯಲ್ಲಿ ಇರಲು ಅನರ್ಹರು ಆದ್ದರಿಂದ ಆಡಳಿತ ಮಂಡಳಿ ಇವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು.
ಇದಲ್ಲದೆ ಈ ಶಿಕ್ಷಕನ ವಿರುದ್ಧ ಇದೇ ರೀತಿಯ ಹಲವು ಆರೋಪಗಳಿದ್ದು ಧರ್ಮದ ಆಧಾರದಲ್ಲಿ ಇವರು ವಿದ್ಯಾರ್ಥಿಗಳ ನಡುವೆ ತಾರತಮ್ಯ ಎಸಗುತ್ತಾರೆ ಎಂಬ ಆರೋಪವು ಕೇಳಿ ಬಂದಿದೆ. ಆದ್ದರಿಂದ ಪೊಲೀಸ್ ಇಲಾಖೆ ಇವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.