ಡೈಲಿ ವಾರ್ತೆ: 14/MAY/2025

ವಿಟ್ಲ ಆಹ್ಮದ್ ಕುಂಞಿ ಫ್ಯಾಮಿಲಿ ಗ್ರೂಪ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

ವಿಟ್ಲ ಮೇ13 ವಿಟ್ಲ ಆಹ್ಮದ್ ಕುಂಞಿ ಫ್ಯಾಮಿಲಿ ಗ್ರೂಪ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಕೆದುಮೂಳೆಯ ಬಿಬಿ ಹೌಸ್ ನಲ್ಲಿ ಕುಟುಂಬದ ಮುಖ್ಯಸ್ಥರಾದ ಯುವ ಉದ್ಯಮಿ ಕಲಂದರ್ ರವರ ನೇತೃತ್ವದಲ್ಲಿ ನಡೆಯಿತು.

ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ರಹಿಮಾನ್ ಬೋಳಿಯಾರ್ ರವರು ಉದ್ಘಾಟಿಸಿ ಕುಟುಂಬ ಸಂಬಂಧದ ಪ್ರಾಮುಖ್ಯತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಲಂದರ್ ರವರು ಮಕ್ಕಳಿಗೆ ಪೋಷಕರು ಕುಟುಂಬದ ಪರಿಚಯವನ್ನು ಸಣ್ಣ ಪ್ರಾಯದಲ್ಲಿಯೇ ಮಾಡಿಕೊಡಬೇಕು ಹಾಗೂ ಈ ರೀತಿಯ ಕುಟುಂಬ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸುವುದರಿಂದ ಕುಟುಂಬ ಸಂಬಂಧ ಗಟ್ಟಿಯಾಗುವುದರೊಂದಿಗೆ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರುಗಳಾದ ಹಕೀಂ ಮಂಗಿಲಪದವು,ಅಝೀಝ್ ಕೆದುಮೂಳೆ ,ಹನೀಫ್ ಬೋಳಿಯಾರ್,ಇಸಾಕ್ ಮಂಗಿಲಪದವು,ಹನೀಫ್ ಕಾಮಾಜೆ ಸಿದ್ದೀಕ್ ಕಾರಾಜೆ,ನೌಫಲ್ ಕುಕ್ಕೋಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಟುಂಬದ ಸದಸ್ಯರುಗಳಿಗೆ ಆಟೋಟ ಸ್ಪರ್ಧೆಗಳನ್ನು ಹಾಗೂ ವಿವಿದ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಹಾಗೂ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.