



ಡೈಲಿ ವಾರ್ತೆ: 16/MAY/2025


ಸಾಸ್ತಾನ| ಕ್ಲಿನಿಕ್ ಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ! ಆರೋಪಿ ವೈದ್ಯನ ಬಂಧನ

ಕೋಟ: ಅನಾರೋಗ್ಯದ ಕಾರಣದಿಂದಾಗಿ ಕ್ಲಿನಿಕ್ ಗೆ ಬಂದ ಯುವತಿಯೊಡನೆ ವೈದ್ಯನೋರ್ವ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬ್ರಹ್ಮಾವರದ ತಾಲೂಕಿನ ಸಾಸ್ತಾನದಲ್ಲಿ ನಡೆದಿದೆ.
ಸಾಸ್ತಾನದ ಸ್ಥಳೀಯ ನಿವಾಸಿ, ಸದ್ಯ ಮುಂಬೈಯಲ್ಲಿ ವಾಸವಿರುವ ಸುಮಾರು 20 ವರ್ಷ ಪ್ರಾಯದ ಯುವತಿಯೋರ್ವಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾರೆ. ಆಗ ಅಲ್ಲಿನ ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಯುವತಿ ಮನೆಗೆ ಹೋಗಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲ ಸೇರಿ ಸಂಜೆ ಡಾಕ್ಟರ್ ಬರುವ ವೇಳೆಗೆ ಕಾದು ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ.
ತಕ್ಷಣ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.
ಕೋಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.