



ಡೈಲಿ ವಾರ್ತೆ: 16/MAY/2025


ಕೋಮುದ್ವೇಷ ಭಾಷಣ: ಭರತ್ ಕುಮ್ಡೇಲ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೋಮುದ್ವೇಷದ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಭರತ್ ಕುಮ್ಡೇಲ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಪುತ್ತೂರಿನಲ್ಲಿ ಇತ್ತೀಚೆಗೆ ಹತ್ಯೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಗೆ ನುಡಿನಮನ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಭರತ್ ಕುಮ್ಡೇಲ್ ಕೋಮುದ್ವೇಷವನ್ನು ಉಂಟುಮಾಡುವಂತಹ ಭಾಷಣವನ್ನು ಮಾಡಿದ್ದು, ಆರೋಪಿಯ ಮಾತುಗಳಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವಂತಹ ಸಾಧ್ಯತೆಗಳಿವೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಆರೋಪಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ 35/2025 ಕಲಂ-196,353(2) BNS 2023. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ವೈರಲ್ ವೀಡಿಯೋದಲ್ಲಿ, “ ನಾವು ಸುಹಾಸ್ ಶೆಟ್ಟಿ ಕೊಲೆಗೆ ಕೈಕಟ್ಟಿ ಕೂರುವುದಿಲ್ಲ, ಮುಸ್ಲಿಮರನ್ನು ಕ್ರೂರವಾಗಿ ಕೊಚ್ಚಿಕೊಚ್ಚಿ ಕೊಲೆ ಮಾಡುತ್ತೇವೆ, ಈ ಹಿಂದೆಯೂ ನಮ್ಮ ಸಹೋದರರು ಮುಸ್ಲಿಮರನ್ನು ಕೊಚ್ಚಿ ಮುಂಡದಿಂದ ರುಂಡ ಬೇರೆಬೇರೆ ಮಾಡಿದ್ದಾರೆ, ಪೋಸ್ಟ್ ಮಾರ್ಟಂನಲ್ಲಿ ಸ್ಟಿಚ್ ಹಾಕಲು ಒಂದೇ ಒಂದು ಜಾಗ ಬಾಕಿಯಾಗದಂತೆ ನಮ್ಮವರು ಕೊಂದಿದ್ದಾರೆ ಎಂದಿದ್ದಲ್ಲದೆ ಈ ಕರಾವಳಿಯಲ್ಲಿ ನಾವು ಮತ್ತೆ ಪ್ರತೀಕಾರದ ಕೊಲೆ ಮಾಡಿಯೇ ಮಾಡುತ್ತೇವೆ. ಸುಮ್ಮನೆ ಕೂರಲು ಇದು ಕಾಶ್ಮೀರ ಅಲ್ಲ ಎಂದು ಭರತ್ ಕುಮ್ಡೇಲ್ ಹೇಳಿದ್ದಾರೆ.