ಡೈಲಿ ವಾರ್ತೆ: 17/MAY/2025

ಕುಂದಾಪುರ: ಕಿಡಿಗೇಡಿಗಳಿಂದ ರಸ್ತೆಯಲ್ಲಿ ಪಾಕ್‌ ಧ್ವಜ ಅಳವಡಿಕೆ – ಪ್ರಕರಣ ದಾಖಲು

ಕುಂದಾಪುರ: ಕಾಳಾವರ – ಜಪ್ತಿ ರಸ್ತೆಯ ದಬ್ಬೆಕಟ್ಟೆ ಬಳಿ ಕಿಡಿಗೇಡಿಗಳು ಮೇ 16ರಂದು ಬೆಳಗ್ಗೆ ಪಾಕಿಸ್ಥಾನ ಧ್ವಜವಿರುವ ಪ್ಲಾಸ್ಟಿಕ್‌ ಬ್ಯಾನರನ್ನು ರಸ್ತೆಗೆ ಮೊಳೆ ಹೊಡೆದು ಹಾಸಿದ್ದು, ಈ ಸಂಬಂಧ ಕೇಸು ದಾಖಲಾಗಿದೆ.

ಜಪ್ತಿಯ ಸಚಿನ್ (29) ಬೈಕ್‌ನಲ್ಲಿ ಸಂಚರಿಸುವಾಗ ಜಪ್ತಿ ಗ್ರಾಮದ ದಬ್ಬೆಕಟ್ಟೆ ಎಂಬಲ್ಲಿ ರಸ್ತೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕ್ ಧ್ವಜದ ಪ್ಲಾಸ್ಟಿಕ್ ಬ್ಯಾನರನ್ನು ರಸ್ತೆಗೆ ಮೊಳೆ ಹೊಡೆದು ಹಾಸಿದ್ದರು. ಸ್ವಲ್ಪ ದೂರದಲ್ಲಿ ಇನ್ನೊಂದು ಕಡೆಯೂ ಅದೇ ರೀತಿ ರಸ್ತೆಗೆ ಪ್ಲಾಸ್ಟಿಕ್ ಬ್ಯಾನರನ್ನು ಹಾಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಸಚಿನ್ ಇದನ್ನು ಅಲ್ಲಿಂದ ತೆಗೆದು, ಬದಿಗೆ ಹಾಕಿದ್ದಾರೆ. ಸಚಿನ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.