ಡೈಲಿ ವಾರ್ತೆ: 18/MAY/2025

ಕೋಟ ಸಹಕಾರಿ ವ್ಯವಸಾಯಕ ಸಂಘದ ಮಣೂರು ಶಾಖೆಯ ನೂತನ ಶಾಖಾ ಕಟ್ಟಡ ಲೋಕಾರ್ಪಣೆ: ಕೋಟ ಸಹಕಾರಿ ಸಂಘ ಅಭಿವೃದ್ಧಿ ಮುನ್ನುಡಿ -ಡಾ.ಎಂ ಎನ್ ರಾಜೇಂದ್ರ ಕುಮಾರ್

ಕೋಟ: ಗ್ರಾಮೀಣಭಾಗದಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದ ಕೋಟ ಸಹಕಾರಿ ಸಂಘ ಮಾದರಿಯಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಭಾನುವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಮಣೂರು ಶಾಖೆಯ ನೂತನ ಶಾಖಾ ಕಟ್ಟಡ, ಗೋದಾಮು ಮತ್ತು ವಸತಿ ಸಂಕೀರ್ಣ ಸಹಕಾರ ರಶ್ಮಿ ಉದ್ಘಾಟಿಸಿ ಮಾತನಾಡಿ
ಅವಿಭಜಿತ ದ.ಕ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಮುಂಚೂಣ ಯಲ್ಲಿದೆ . ಇಲ್ಲಿರುವ 120 ವ್ಯವಸಾಯ ಸೇವಾ ಸಹಕಾರಿ ಸಂಘಗಳು ಲಾಭದಲ್ಲಿ ಮುನ್ನೆಡೆಯುತ್ತಿವೆ. ಮಾತ್ರವಲ್ಲ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸಹಕಾರ ಕ್ಷೇತ್ರದ ವಿಶ್ವಾಸಾರ್ಹತೆಯ ಸಂಕೇತ ಎಂದರಲ್ಲದೆ ಸಹಕಾರ ಸಂಘಗಳ ಜನಸಾಮಾನ್ಯರ ಆಪ್ತವಾಗಿವೆ. ಸಹಕಾರಿಗಳ ಅವಶ್ಯತೆಗಳನ್ನು ಪೂರೈಸುತ್ತಿವೆ. ಆರ್ಥಿಕ ಸಬಲತೆ, ಮಹಿಳಾ ಸ್ವಾವಲಂಬನೆ, ಕೃಷಿಕರಿಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಿವೆ. ಜನರು ಕೂಡಾ ಸಹಕಾರ ಕ್ಷೇತ್ರದತ್ತ ಹೆಚ್ಚು ವಿಶ್ವಾಸ ಇರಿಸಿಕೊಂಡಿರುವುದು ಕಾಣಬಹುದಾಗಿದೆ ಎಂದು ಹೇಳಿದ ಅವರು, ಕೋಟ ಸಹಕಾರಿ ವ್ಯವಸಾಯಕ ಸಂಘ ಇವತ್ತು 13 ಶಾಖೆಗಳನ್ನು ಹೊಂದಿ, 9 ಶಾಖೆಗಳಿಗೆ ಸ್ವಂ ಕಟ್ಟಡ, 270 ಕೋಟಿ ಠೇವಣಾತಿ, 350 ಕೋಟಿ ಸಾಲ ನೀಡುವುದು ಮಾತ್ರವಲ್ಲದೆ 98.8 ವಸೂಲಾತಿ, ಪ್ರತೀವರ್ಷ ಆಕರ್ಷಕ ಡಿವಿಡೆಂಡ್ ನೀಡುವ ಮೂಲಕ ಮಾದರಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್
ಮಾತನಾಡಿ, ಕೋಟ ಸಹಕಾರಿ ಸಂಸ್ಥೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ರಂಗದಲ್ಲೇ ಮುಂಚೂಣ ಸಂಸ್ಥೆಯಾಗಿ ಬೆಳೆದು ಬಂದಿದ್ದು 13 ಶಾಖೆಗಳು ಮತ್ತು 12 ಪಡಿತರ ಮಾರಾಟ ಮಳಿಗೆ ಮತ್ತು ಸಕಲ ಮಾರಾಟ ಮಳಿಗೆಗಳನ್ನು ಹೊಂದಿದೆ. ಪ್ರಧಾನ ಕಚೇರಿ ಮತ್ತು 9 ಶಾಖೆಗಳು ಸ್ವಂತ ಕಟ್ಟಡ ಹೊಂದಿದ್ದು ಇನ್ನೆರಡು ಶಾಖೆಗಳ ಸ್ವಂತ ಕಟ್ಟಡಕ್ಕಾಗಿ ಈಗಾಗಲೇ ನಿವೇಶನ ಖರೀದಿ ನಡೆದಿದೆ. ಜತೆಗೆ ರಾಜ್ಯದಲ್ಲೇ ವಿನೂತನ ಯೋಜನೆಗಳನ್ನು ಸಂಸ್ಥೆ ಪರಿಚಯಿಸಿದೆ ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು.
ಗೋದಾಮು ಕಟ್ಟಡವನ್ನು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ರೋಟರಿ ವಲಯ-7ರ ಜಿಲ್ಲಾ ಸಲಹೆಗಾರರಾದ ಪಿ.ಡಿ.ಜಿ. ಅಭಿನಂದನ್ ಎ. ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ ಶೆಟ್ಟಿ, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ಕುಂದಾಪುರ ಇದರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ನಾಗರಾಜ ಹಂದೆ, ನಿದೇರ್ಶಕರಾದ ಜಿ.ತಿಮ್ಮ ಪೂಜಾರಿ, ಟಿ.ಮಂಜುನಾಥ, ಕೆ.ಉದಯಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ ಪಿ., ಅಜಿತ್ ದೇವಾಡಿಗ, ವಸಂತಿ ಪೂಜಾರಿ, ಉಮಾ ಗಾಣಿಗ, ವಲಯ ಮೇಲ್ವಿಚಾರಕ ರಾಜಾರಾಮ ಶೆಟ್ಟಿ, ಶಾಖಾ ಸಭಾಪತಿ ಮಹೇಶ ಶೆಟ್ಟಿ ಎಮ್,
ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಶಾಖಾ ವ್ಯವಸ್ಥಾಪಕ ಸಂತೋಷ ಕುಮಾರ ಶೆಟ್ಟಿ, ನಿವೃತ್ತ ಸಿ.ಇ.ಓ ಜಿ.ಎಂ.ಸೋಮಾಯಾಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಕೆ. ಶಿವಮೂರ್ತಿ ಉಪಾಧ್ಯ, ಹಾಗೂ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.

ಸಂಘದ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರು ಸ್ವಾಗತಿಸಿ, ತಿಮ್ಮ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಕೀಚಕ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.