



ಡೈಲಿ ವಾರ್ತೆ: 21/MAY/2025


ಕನ್ನಡ ನಾಡಿನ ಮೊಟ್ಟಮೊದಲ ಕೃತಿಗೆ “ಬೂಕರ್” ಪ್ರಶಸ್ತಿ ಗರಿ: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್

ಹಾಸನ: ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆ ಮೂಲಕ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ.
‘ಹಾರ್ಟ್ ಲ್ಯಾಂಪ್’ ಎಂಬ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹಾಗಾಗಿ ಕರುನಾಡಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಮಂಗಳವಾರ ಇಂಗ್ಲೆಂಡ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ಅಂದಾಜು 57.28 ಲಕ್ಷ ರೂ. ನಗದು ಒಳಗೊಂಡಿದೆ.
ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಮೂಲತಃ ಹಾಸನದವರು. ಇತ್ತೀಚೆಗೆ ಅಂದರೆ ಫೆಬ್ರುವರಿಯಲ್ಲಿ ಅವರು ಕೃತಿ ಲಾಂಗ್ ಲಿಸ್ಟ್ನಲ್ಲಿ ಆಯ್ಕೆಯಾಗಿತ್ತು. ಬಳಿಕ ಏಪ್ರಿಲ್ 8 ರಂದು ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದಿತ್ತು.