ಡೈಲಿ ವಾರ್ತೆ: 25/MAY/2025

ಎಸ್ಸೆಸ್ಸೆಲ್ಸಿ ಮರು ಮೌಲ್ಯ ಮಾಪನ: ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಗೆ ರಾಜ್ಯ ಮಟ್ಟದ 7 ರ್‍ಯಾಂಕ್

ಕುಂದಾಪುರ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ(ರಿ.) ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಶ್ರೀ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್‍ಯಾಂಕ್ ಗಳಿಸಿದ್ದಾಳೆ.


ಮರು ಮೌಲ್ಯ ಮಾಪನದಲ್ಲಿ ಅಪೇಕ್ಷಾ ಎನ್. ಶೆಟ್ಟಿ ಮತ್ತು ಸುಖಿ ಎಸ್ ಶೆಟ್ಟಿ 620 ಅಂಕಗಳೊಂದಿಗೆ 6ನೇ ಸ್ಥಾನ, ಕನ್ನಿಕಾ 617 ಅಂಕ ಗಳಿಸಿ 9ನೇ ಸ್ಥಾನ ಪಡೆದಿರುತ್ತಾಳೆ.ಸಂಸ್ಥೆಯ ಪ್ರಾವ್ಯ ಪಿ.ಶೆಟ್ಟಿ 623 ಅಂಕಗಳು ಮತ್ತು ಅನುಶ್ರೀ 623 ಅಂಕಗಳೊಂದಿಗೆ 3ನೇ ರ್‍ಯಾಂಕ್, ಆಯುಷ್ ಯು.622 ಅಂಕ ಗಳಿಸಿ 4ನೇ ರ್‍ಯಾಂಕ್,ಅಪೇಕ್ಷಾ ಎನ್. ಶೆಟ್ಟಿ 620 ಮತ್ತು ಸುಖಿ ಎಸ್. 620 ಅಂಕಗಳೊಂದಿಗೆ 6ನೇ ರ್‍ಯಾಂಕ್,ಕನ್ನಿಕಾ 617 ಅಂಕ ಗಳಿಸಿ 9ನೇ ರ್‍ಯಾಂಕ್ ಮತ್ತು ದರ್ಶನ್ ಕೆ.ಯು.616 ಅಂಕ ಗಳಿಸಿ 10ನೇ ರ್‍ಯಾಂಕ್ ಗಳಿಸಿ, ಸಂಸ್ಥೆಯು ಒಟ್ಟು ರಾಜ್ಯ ಮಟ್ಟದ 7 ರ್‍ಯಾಂಕ್ ಗಳನ್ನು ತನ್ನದಾಗಿಸಿಕೊಂಡಿದೆ.ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿಗಳಾದ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯ ಶಿಕ್ಷಕರಾದ ಪ್ರದೀಪ್ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಉತ್ಕೃಷ್ಟ ಸಾಧನೆಯಿಂದ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.