ಡೈಲಿ ವಾರ್ತೆ: 25/MAY/2025

ಬಂಟ್ವಾಳದಲ್ಲಿ ಮುಂದುವರಿದ ಮಳೆ ಬಿರುಸು : ಹಲವೆಡೆ ವ್ಯಾಪಕ ಹಾನಿ

ಬಂಟ್ವಾಳ : ತಾಲೂಕಿನಾದ್ಯಂತ ಮಳೆ ಬಿರುಸು ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಯ ತಡೆ ಗೋಡೆ ಕುಸಿದಿರುತ್ತದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಬೆಯಲ್ಲಿ ಶಿಥಿಲಗೊಂಡ ಛಾವಣಿಗೆ ಟಾರ್ಪಲ್ ಅಳವಡಿಸಲು ಕ್ರಮವಹಿಸಲಾಗಿದೆ. ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಅಬೂಬಕ್ಕರ್ ಬಿನ್ ಹಸನಬ್ಬ ಅವರ ಮನೆ ಗೋಡೆ ಹಾಗೂ ಹಂಚಿಗೆ ಹಾನಿಯಾಗಿದೆ. ಬಡಗಬೆಳ್ಳೂರು ಗ್ರಾಮದ ನಿವಾಸಿ ಮಮತಾ ಅವರ ಮನೆಯ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿಯಾಗಿದೆ.

ನೆಟ್ಲಮುಡ್ನೂರು ಗ್ರಾಮದ ಪರ್ಲೊಟ್ಟು ಬಳಿ ಮರ ಬಿದ್ದು ಕಾಲು ಸಂಕ ಮುರಿದು ಬಿದ್ದಿದೆ. ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಜಿ.ಎಂ. ಅಬ್ದುಲ್ ಲತೀಪ್ ಬಿನ್ ಅಬ್ದುಲ್ ಖಾದರ್ ಅವರ ತಡೆಗೋಡೆ ಬಿದ್ದಿದ್ದು ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ. ಸಜಿಪಮುನ್ನೂರು ಗ್ರಾಮದ ನಿವಾಸಿ ಮುಬಾರಕ್ ಅವರ ಮನೆಗೆ ಸ್ಥಳೀಯ ಚರಂಡಿಯ ನೀರು ನುಗ್ಗಿದ್ದು, ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದೆ.