



ಡೈಲಿ ವಾರ್ತೆ: 25/MAY/2025


ಕೋಲ್ಪೆ : ಸುರಕ್ಷಾ ಕನ್ಸ್ ಟ್ರಕ್ಷನ್ ಮಾಲಕ ಸಿದ್ದೀಕ್ ಸಮೀರ್ ಸೂರ್ಯ ಇವರಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಿಣೆ

ಬಂಟ್ವಾಳ : ಇಡ್ಕಿದು ಗ್ರಾಮದ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಜಮಾಅತ್ ವ್ಯಾಪ್ತಿಯ ಮದ್ರಸ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಣಾ ಕಾರ್ಯಕ್ರಮ ಶನಿವಾರ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಿತು.
ಸುರಕ್ಷಾ ಕನ್ಸ್ ಟ್ರಕ್ಷನ್ ಮಾಲಕ ಸಿದ್ದೀಕ್ ಸಮೀರ್ ಸೂರ್ಯ ಇವರ ವತಿಯಿಂದ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬ್ ನೌಶಾದ್ ಕಾಮಿಲ್ ಸಖಾಫಿ ಪುರ್ಖಾನಿ, ಅಧ್ಯಕ್ಷ ಶೇಕಬ್ಬ ಹಾಜಿ ಕೋಲ್ಪೆ, ಕಾರ್ಯದರ್ಶಿ ಆಸಿಫ್ ಕೋಲ್ಪೆ, ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ಅಝೀಝ್ ಕೋಲ್ಪೆ, ಕಾರ್ಯದರ್ಶಿ ಇಲ್ಯಾಸ್ ಕೋಲ್ಪೆ, ಪ್ರಮುಖರಾದ ಅಬೂಬಕ್ಕರ್ ಕೋಲ್ಪೆ, ಅಶ್ರಫ್ ಹೋನೆಸ್ಟ್, ಸುಲೈಮಾನ್ ಅಕ್ಕರೆ, ಇಬ್ರಾಹಿಂ ಅಕ್ಕರೆ, ಮನ್ಸೂರ್ ನೇರಳಕಟ್ಟೆ, ಸಬ್ಬೀರ್ ಅಳಕೆಮಜಲು, ಸಾದಿಕ್ ಪಾಟ್ರಕೋಡಿ, ಪಿ.ಎಸ್.ರಫೀಕ್ ಪಾಟ್ರಕೋಡಿ, ನೌಶಾದ್ ಅಕ್ಕರೆ, ಜಿಯಾ ಕೋಲ್ಪೆ, ರಶೀದ್ ಕೋಲ್ಪೆ ಮೊದಲಾದವರು ಉಪಸ್ಥಿತರಿದ್ದರು.