ಡೈಲಿ ವಾರ್ತೆ: 10/JUNE/2025

ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಪಡುಕರೆಯಲ್ಲಿ ಮಳೆ ನೀರು ತೋಡು ಹೂಳೆತ್ತುವ ಕಾಮಗಾರಿಗೆ ಚಾಲನೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ 5ನೇ ವಾರ್ಡಿನಲ್ಲಿ ಸುಮಾರು 700 ಮೀಟರ್ ಉದ್ದದ ತನಕ ತೋಡು ಹೂಳೆತ್ತುವ ಕಾಮಗಾರಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡು ಜೂ. 9 ರಂದು ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್
ಚಾಲನೆ ನೀಡಿದರು.

ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ತಮ್ಮನ್ನು ನಮ್ಮೂರ ತೋಡು ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿತ್ತು.

ಜನತೆಯನ್ನು ಸಮನ್ವಯಗೊಳಿಸಿ ತೋಡು ಹೂಳೆತ್ತುವ ಸಾರ್ವಜನಿಕರ ಬಹುಪಯೋಗಿ ಕಾಮಗಾರಿಗೆ ಕೈಗೊಂಡಿರುವುದಕ್ಕೆ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಹರ್ಷ ವ್ಯಕ್ತಪಡಿಸಿದರು.

ವಾರ್ಡ್ ಸದಸ್ಯೆ ವಿದ್ಯಾ ಸಾಲಿಯಾನ್ ಮಾತನಾಡಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಾಮೂಹಿಕ ಕಾಮಗಾರಿ ಅಲ್ಲದೇ ವೈಯಕ್ತಿಕ ಬಾವಿ, ಹಟ್ಟಿ, ಇಂಗು ಗುಂಡಿ, ಮಲ್ಲಿಗೆ ಕೃಷಿ ಇತ್ಯಾದಿ ಸೌಲಭ್ಯ ಪಡೆಯಲು ಅನುಕೂಲಕರವಾಗಿದೆ. ತೋಡು ಹೂಳೆತ್ತುವ ಕಾಮಗಾರಿ ಅನುಷ್ಠಾನ ಗೊಳಿಸಲು ಸಹಕರಿಸಿದ ಸರ್ವರಿಗೂ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸಾಹಿರ ಬಾನು ಮತ್ತು ರಾಬರ್ಟ್ ರೋಡ್ರಿಗಸ್ ಇವರು ಉಪಸ್ತಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿ, ನವೀನ್ ವಂದಿಸಿದರು, ಬಿ.ಎಫ್.ಟಿ ನಿತಿನ್ ಹಾಗೂ ಗ್ರಾಮಸ್ಥರು ಉಪಸ್ತಿತರಿದ್ದರು..