



ಡೈಲಿ ವಾರ್ತೆ: 14/JUNE/2025


ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ನೆರವು ಹಸ್ತಾಂತರ

ಸಾಲಿಗ್ರಾಮ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮುಖೇನ ಪಾರಂಪಳ್ಳಿ ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು.ಅನನ್ಯ ಭಟ್ ಇವರಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ಟ್ರಸ್ಟಿಗಳಾದ ಸದಾಶಿವ ಮಧ್ಯಸ್ಥ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ ಶಿವರಾಮ ಉಡುಪ, ಉಪಾಧ್ಯಕ್ಷರಾದ ಪಟ್ಟಾಭಿರಾಮ ಸೋಮಯಾಜಿ, ಸುಬ್ರಾಯ ಉರಾಳ ಮುಂತಾದವರು ಉಪಸ್ಥಿತರಿದ್ದರು.
ಸಭಾದ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.