ಡೈಲಿ ವಾರ್ತೆ: 18/JUNE/2025

ಮಂಗಳೂರು| ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ – NSUI ಮುಖಂಡ ಸೇರಿ ಇಬ್ಬರು ದಾರುಣ ಸಾವು!

ಮಂಗಳೂರು : ಸ್ಕೋಡಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಪ್ಪಿನಮೊಗರು ರಾ.ಹೆ. 66ರ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸದೆ.

ಕಾರು ಚಾಲಕ ಮಂಗಳೂರಿನ ಕದ್ರಿ ನಿವಾಸಿ ಅಮನ್ ರಾವ್(22) ಮತ್ತು ಚಾಲಕನ ಸೀಟಿನ ಹಿಂಬದಿಯಲ್ಲಿದ್ದ ದೇರೆಬೈಲ್ ನಿವಾಸಿ, ಎನ್‌ಎಸ್ ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ(24) ಮೃತಪಟ್ಟ ದುರ್ದೈವಿಗಳು

ಐವರು ಯುವಕರಿದ್ದ ಫೋಕ್ಸ್ ವೇಗನ್ ವರ್ಟಸ್ ಕಾರಿನಲ್ಲಿ ತಲಪಾಡಿಯಿಂದ ಮಂಗಳೂರಿನ ಕಡೆಗೆ ಅತಿ ವೇಗದಿಂದ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಕಾರು ಸಂಪೂರ್ಣ ಪುಡಿಯಾಗಿದ್ದು ಇಂಜಿನ್ ಭಾಗವೇ ಹೊರಕ್ಕೆ ಬಂದಿದ್ದು ಏರ್ ಬ್ಯಾಗ್ ಚಿಂದಿಯಾಗಿದೆ. ಸಾಮಾನ್ಯವಾಗಿ ಜರ್ಮನಿ ಮೂಲದ ಫೋಕ್ಸ್ ವೇಗನ್ ಕಾರು ಡಿಕ್ಕಿಯಾದರೂ ಪ್ರಾಣಾಪಾಯ ಆಗಲ್ಲ. ಏರ್ ಬ್ಯಾಗ್ ಮತ್ತು ಹೊರಭಾಗವೂ ಗಟ್ಟಿಯಾಗಿರತ್ತದೆ. ಇಲ್ಲಿ 200 ಕಿಮೀ ವೇಗದಲ್ಲಿ ಬಂದಿರುವ ಸಾಧ್ಯತೆಯಿದ್ದು ಅದರಿಂದಾಗಿ ಇಷ್ಟೊಂದು ಭೀಕರ ಸ್ಥಿತಿಯಾಗಿದೆ ಎಂದು ಕಾರಿನ ಬಗ್ಗೆ ತಿಳಿದವರು ಹೇಳುತ್ತಾರೆ.

ಮೃತಪಟ್ಟವರಲ್ಲಿ ಓಂಶ್ರೀ ಪೂಜಾರಿ ದಕ್ಷಿಣ ಕನ್ನಡ ಎನ್ ಎಸ್‌ಐಯು ಘಟಕದ ಉಪಾಧ್ಯಕ್ಷರಾಗಿದ್ದು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿದ್ದರು. ಅಮನ್ ರಾವ್ ಆತನ ಗೆಳೆಯನಾಗಿದ್ದು ರಾತ್ರಿ ಕಂಕನಾಡಿಯಲ್ಲಿ ಪಾರ್ಟಿ ಮುಗಿಸಿ ತಲಪಾಡಿಯಲ್ಲಿ ಊಟ ತಿಂದು ಮುಗಿಸಿ ಹಿಂತಿರುಗುತ್ತಿದ್ದರು. ಜೊತೆಗಿದ್ದ ವಂಶಿ ಮತ್ತು ಆಶಿಕ್ ಗಂಭೀರ ಗಾಯಗೊಂಡಿದ್ದು ತೀವ್ರ ನಿಗಾದಲ್ಲಿದ್ದಾರೆ. ಇವರೊಂದಿಗೆ ಇನ್ನೊಬ್ಬ ಇಟಲಿ ಮೂಲದ ಪ್ರವಾಸಿಗ ಜೆರ್ರಿ ಎಂಬಾತನಿದ್ದು ಆತ ಅಪಾಯದಿಂದ ಪಾರಾಗಿದ್ದಾನೆ. ಮೃತ ಅಮನ್ ರಾವ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಜೊತೆಗೆ ಗುರುತಿಸಿಕೊಂಡಿದ್ದು ಪ್ಲೆಕ್ಸ್, ಪೋಸ್ಟರ್ ಮಾಡುವ ಉದ್ಯಮ ನಡೆಸುತ್ತಿದ್ದ.