



ಡೈಲಿ ವಾರ್ತೆ: 22/JUNE/2025


ಬೈಂದೂರು ಹೆಚ್. ಎ. ಇಂಟರ್ನ್ಯಾಷನಲ್ ಟ್ರಾವೆಲ್ಸ್ ಅಂಡ್ ಸರ್ವೀಸ್ ಸಂಸ್ಥೆ ವತಿಯಿಂದ ಲಕ್ಕಿ ಡ್ರಾ ಕಾರ್ಯಕ್ರಮ

ಬೈಂದೂರಿನಲ್ಲಿ ಸುಮಾರು ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹೆಚ್ ಎ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಅಂಡ್ ಸರ್ವೀಸ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಏರ್ಪಡಿಸಿದ ಲಕ್ಕಿ ಬಂಪರ್ ಡ್ರಾ ಕಾರ್ಯಕ್ರಮ ಸಂಸ್ಥೆಯ ಜಾಮಿಯಾ ಮಸೀದಿ ಬಳಿ ಇರುವ ಕಚೇರಿಯಲ್ಲಿ ಏರ್ಪಡಿಸಲಾಗಿದ್ದು ಬಂಪರ್ ಬಹುಮಾನವಾಗಿ ಘೋಷಿಸಲಾಗಿದ್ದ 70000 ಮೊತ್ತದ ಪವಿತ್ರ ಮಕ್ಕ ಮದೀನ ಯಾತ್ರೆಯ ಉಮ್ರ ಪ್ಯಾಕೇಜ್ ಅನ್ನು ಶ್ರೀಯುತ ಅಲ್ತಾಫ್ s/o ಬಾವಾಮೀರ್ ಯೊಜನಾ ನಗರ ರವರು ಪಡೆದುಕೊಂಡರು ಅದೇ ರೀತಿಯಲ್ಲಿ ಎರಡನೇ ಬಹುಮಾನವನ್ನು ಶ್ರೀಯುತ ಶಾಜೀಬ್ s/o ಅಬ್ದುಲ್ ಸಮದ್ ಶಿರಾಲಿ ಹಾಗೆ ಮೂರನೇ ಬಹುಮಾನವನ್ನು ಶ್ರೀಮತಿ ಬಿಬಿ ಫಾತಿಮಾ (w/o ತಲ್ಹಾ) ಬೈಂದೂರು ಪಡೆದುಕೊಂಡರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಬ್ಬೀರ್ ಬೈಂದೂರು ಅವರು ಬಹುಮಾನ ವಿತರಣೆ ನಡೆಸಿ ಸಂಸ್ಥೆಯು ಇನ್ನು ಮುಂದೆಯೂ ಗ್ರಾಹಕರಿಗೆ ಅನುಕೂಲವಾಗುವಂತ ಇಂತಹ ಕಾರ್ಯಕ್ರಮಗಳನ್ನು ನಡೆಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಯ್ಯಬ್ ಹುಸೇನ್ ನೂರಿ ಇಮಾಮ್ ಜಾಮಿಯಾ ಮಸೀದಿ ಬೈಂದೂರು ಮೌಲಾನ ಝುಲ್ಫೀಕರ್ ಅಲಿ ಮಿಸ್ಬಾಯಿ ಇಮಾಮ್ ಆಯಿಷಾ ಮಸೀದಿ ಶಿರೂರು. ಮೌಲಾನಾ ಮಸೂದ್ ಮದನಿ, ಮೌಲಾನ ರಹತ್ ಅಲಿ, ಮಾಜಿ ಪಂಚಾಯಿತ್ ಸದಸ್ಯ ಡಿ.ಅಬ್ದುಲ್ ಕಾದಿರ್ ಬಾಪು ಸಾಹೇಬ್ ಭಾಗವಹಿಸಿದ್ದರು ಸಂಸ್ಥೆಯ ನೂರಾರು ಮಂದಿ ಗ್ರಾಹಕರು ಕಾರ್ಯಕ್ರಮದಲ್ಲಿ ಹಾಜರಿದ್ದರು, ಸಂಸ್ಥೆಯ ಮಾಲೀಕರಾದ ತಾಬೀಶ್ ರಝಾ ಬೈಂದೂರು ಕಾರ್ಯಕ್ರಮ ನಡೆಸಿಕೊಟ್ಟರು.