



ಡೈಲಿ ವಾರ್ತೆ: 30/JUNE/2025


ಮಾಬುಕಳ| ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ – ಸವಾರ ಗಂಭೀರ ಗಾಯ!

ಬ್ರಹ್ಮಾವರ: ಖಾಸಗಿ ಬಸ್ಸೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯ ಗೊಂಡ ಘಟನೆ ಮಾಬುಕಳ ಸೇತುವೆ ಸಮೀಪದ ಕುಮ್ರಗೋಡುನಲ್ಲಿ ಸಂಭವಿಸಿದೆ.
ಗಾಯಗೊಂಡ ಸವಾರ ವಾಹನದಲ್ಲಿದ್ದ ದಾಖಲೆ ಪ್ರಕಾರ ಸಾಸ್ತಾನ ಪಾಂಡೇಶ್ವರ ನಿವಾಸಿ ಬಸವ ತಿಂಗಳಾಯ ಎಂದು ಗುರುತಿಸಲಾಗಿದೆ.
ಖಾಸಗಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಡಿಕ್ಕಿ ಪರಿಣಾಮ ಸ್ಕೂಟರ್ ಸವಾರ ಹಾಗೂ ಸಹ ಸವಾರೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿರುತ್ತಾರೆ.
ತಕ್ಷಣ ಸ್ಥಳೀಯರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುತ್ತಾರೆ.
ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.