ಡೈಲಿ ವಾರ್ತೆ: 04/ಜುಲೈ/2025

ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್ – ತಪ್ಪಿದ ಅನಾಹುತ

ಸಿಗಂದೂರು: ಶರಾವತಿ ಹಿನ್ನೀರಿನ ಪ್ರದೇಶದ ಹೊಳೆಬಾಗಿಲಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಲಾಂಚಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸೇತುವೆ ಕಾಮಗಾರಿಗೆ ಬಂದಿದ್ದ ಲಾಂಚ್ ಮೂಲಕ ಹಗ್ಗ ಕಟ್ಟಿ ಕೆಟ್ಟು ನಿಂತಿದ್ದ ಲಾಂಚ್‍ನ್ನು ದಡಕ್ಕೆ ತರಲಾಯಿತು.

ಮತ್ತೊಂದು ಲಾಂಚ್ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟ ನಿಂತಿದ್ದ ಲಾಂಚ್ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಸೇತುವೆಯ ಪಿಲ್ಲರ್‌ಗೆ ಲಾಂಚ್ ಡಿಕ್ಕಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.