ಡೈಲಿ ವಾರ್ತೆ: 04/ಜುಲೈ/2025

ನಿರಾಧಾರ ಆರೋಪಗಳನ್ನು ಮಾಡುವುದು ಬಿಟ್ಟು ಸತ್ಯವನ್ನು ಒಪ್ಪಿಕೊಳ್ಳಿ – ಶರಣ್ ಪಂಪ್ವೆಲ್ ಗೆ ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ತಾಕೀತು.

ಬ್ರಹ್ಮಾವರ: ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು ಕುಂಜಾಲು ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ದನದ ರುಂಡ ರಸ್ತೆಯಲ್ಲಿ ಸಿಕ್ಕಿದ್ದು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಈ ವಿಷಯವನ್ನು ಮುಂದಿಟ್ಟುಕೊಂಡು ಜು.3 ರಂದು ಗುರುವಾರ ವಿಶ್ವ ಹಿಂದೂ ಪರಿಷತ್ ನ ನಾಯಕ ಶರಣ್ ಪಂಪ್ವೆಲ್ ರವರು ಇದರ ಹಿಂದೆ ಮುಸ್ಲಿಮರ ಕೈವಾಡವಿದೆ ಎಂದು ಹೇಳಿಕೆ ನೀಡಿ ಮುಸ್ಲಿಮರನ್ನು ಜಿಹಾದಿಗಳೆಂದು ನಿಂದಿಸಿದ್ದಾರೆ.

ಇದನ್ನು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಅವರ ಹೇಳಿಕೆಗೆ ಏನಾದರೂ ಪುರಾವೆಗಳಿದ್ದಲ್ಲಿ ಅದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಕರಿಸುವುದು ಬಿಟ್ಟು ಸಾರ್ವಜನಿಕವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಕೋಮು ವಿಷವನ್ನು ಹರಡುವುದನ್ನು ಬಿಡಬೇಕು. ಇಲ್ಲವಾದರೆ ಕೋಮುವಾದಿ ಶರಣ್ ಪಂಪುವೆಲ್ ನ್ನು ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸುವುದರ ಮೂಲಕ ಬಂದಿಸಿ ಹೆಚ್ಚಿನ ತನಿಖೆ ನಡೆಸಬೇಕು.

ಕುಂಜಾಲ್ ಮತ್ತು ಪುತ್ತೂರಿನ ಘಟನೆಗಳಿಂದ ಹಿಂದೂ ರಕ್ಷಕರೆನಿಸಿಕೊಂಡಿರುವವರ ನೈಜ ಬಣ್ಣ ಸಮಾಜದ ಮುಂದೆ ಬಯಲಾಗಿದ್ದು ಅದನ್ನು ಮುಚ್ಚಿಕೊಳ್ಳಲು ಶರಣ್ ರವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಇದ್ದಾರೆ ಅವರು ಸತ್ಯವನ್ನು ಒಪ್ಪಿಕೊಳ್ಳಬೇಕು ಹಾಗೂ ಮುಸ್ಲಿಮರ ವಿರುದ್ಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಅದಲ್ಲದೆ ಇದ್ದರೆ ಇಲ್ಲಿನ ಮುಸ್ಲಿಂರು ಸೌಹಾರ್ದ ಪ್ರೇಮಿ ಜನರೊಂದಿಗೆ ಮತ್ತು ಸಂಘಟನೆಗಳೊಂದಿಗೆ ಸೇರಿಕೊಂಡು ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.