



ಡೈಲಿ ವಾರ್ತೆ: 08/ಜುಲೈ/2025


ಬೈಂದೂರು| ಹಿಂಸಾತ್ಮಕವಾಗಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ – ಪೊಲೀಸರಿಂದ ದನಗಳ ರಕ್ಷಣೆ, ಆರೋಪಿಗಳು ಪರಾರಿ!

ಬೈಂದೂರು: ಹಿಂಸಾತ್ಮಕವಾಗಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು ದನಗಳನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿಣೆನೆ ತಿರುವಿನಲ್ಲಿ ನಡೆದಿದೆ.
ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಇಬ್ಬರು ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಪ್ರಕರಣ ವಿವರ : ದಿನಾಂಕ ಜು 7 ರಂದು ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ನವೀನ್ ಬೋರ್ಕರ್ (ತನಿಖೆ) ರವರಿಗೆ ಬೆಳಿಗ್ಗೆ ಸಮಯಕ್ಕೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಒಂದು ಕೆಂಪು ಬಣ್ಣದ BREZZA ಕಾರಿನಲ್ಲಿ ದನವನ್ನು ಕಳವು ಮಾಡಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಒತ್ತಿನಣೆಯ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ಒತ್ತಿಣೆನೆ ತಿರವಿನಲ್ಲಿ ತಪಾಸಣೆ ಮಾಡುತ್ತಿದ್ದರು.
ಬೆಳಿಗ್ಗೆ 6:00 ಗಂಟೆ ಸಮಯಕ್ಕೆ ಬೈಂದೂರು ಕಡೆಯಿಂದ ಬಂದ ಒಂದು ಕೆಂಪು ಬಣ್ಣದ KA-47-M-8960 ನಂಬ್ರನ BREZZA ಕಾರನ್ನು ತಡೆದು ನಿಲ್ಲಿಸಿದಗ ಕಾರನ್ನು ಹಿಂದಕ್ಕೆ ರಿವರ್ಸ ತೆಗದುಕೊಳ್ಳಲು ಪ್ರಯತ್ನಿಸಿದ್ದು ಹಿಂದುಗಡೆ ವಾಹನ ಇದ್ದುದರಿಂದ ಹಿಂದುಗಡೆ ತೆಗದುಕೊಳ್ಳಲು ಅಗದೆ ಇರುವಾಗ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ. ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ್ದು ಕಾರಿನ ಡಿಕ್ಕಿಯನ್ನು ಒಪನ್ ಮಾಡಿ ನೊಡಿದಾಗ ಯಾವುದೇ ಪರವಾನಿಗೆ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಎಲ್ಲಿಂದಲೋ ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಸಾಗಾಟ ಮಾಡಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.