ಡೈಲಿ ವಾರ್ತೆ: 12/ಜುಲೈ/2025

ಸಂತೆಕಟ್ಟೆ ಪ್ರೌಢಶಾಲೆ ಯಕ್ಷ ಶಿಕ್ಷಣ ತರಬೇತಿಗೆ ಚಾಲನೆ:
ಯಕ್ಷಗಾನ‌ ಕಲಾರಂಗದ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ – ಮುರಳೀ ಕಡೆಕಾರ್

ಬ್ರಹ್ಮಾವರ: ಯಕ್ಷಗಾನ ಕಲಾರಂಗ ಬಡ ಕಲಾವಿದರು, ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡಿ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್‌ನ ಮುಖ್ಯಸ್ಥ ಮುರಳಿ ಕಡೆಕಾರ್ ಹೇಳಿದರು. ಬ್ರಹ್ಮಾವರ ವಲಯದ ಸಂತೆಕಟ್ಟೆ ಅರ್ಬೆಟ್ಟು ವಾಮನ ಕಾಮತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷ ಶಿಕ್ಣಣ ಟ್ರಸ್ಟ್ ವತಿಯಿಂದ ನಡೆಸಲಾಗುವ‌ ಯಕ್ಷಗಾನ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಉಡುಪಿ ಜಿಲ್ಲೆಯ ಸುಮಾರು 90 ಕ್ಕೂ ಹೆಚ್ಚು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ‌
ತರಬೇತಿ ನೀಡಲಾಗುತ್ತಿದೆ.


ಕಲಾರಂಗದ‌ ಮೂಲಕ ಕಲಾವಿದರನ್ನು ಗುರುತಿಸಿ ಆರ್ಥಿಕ ಸಹಾಯ ಮತ್ತು ಸನ್ಮಾನಿಸುವ ಕಾರ್ಯ, ಎಸ್ಸೆಸ್ಸೆಲ್ಸಿಯಲ್ಲಿ ಶೇ.80 ಫಲಿತಾಂಶ ಪಡೆದು ಉನ್ನತ ಶಿಕ್ಣಣಕ್ಕೆ ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ, ವಿದ್ಯಾರ್ಥಿ ವೇತನ ಮತ್ತು ಮನೆಗಳಿಲ್ಲದ ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸುವ ಕಾರ್ಯವಾಗುತ್ತಿದೆ ಎಂದು ತಿಳಿಸಿದರು.


ಶಾಲೆಯ ಎಸ್.ಡಿ.ಎಂ.ಸಿ ಯ ನಾಮ ನಿರ್ದೇಶಿತ ಸದಸ್ಯ ಆರ್ಬೆಟ್ಟು ರಮಾಕಾಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ನಾಮ‌ನಿರ್ದೇಶಿತ ಸದಸ್ಯ ಮನೋಜ ಕುಮಾರ್ ಶೆಟ್ಟಿ, ಯಕ್ಷ ಶಿಕ್ಷಣ ಟ್ರಸ್ಟ್ ನ ನಿರಂಜನ‌ ಭಟ್, ಯಕ್ಷಗುರು ಕರ್ಜೆಯ ಸೀತಾರಾಮ‌ ಆಚಾರ್ಯ ಇದ್ದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ಸ್ವಾಗತಿಸಿದರು. ಸಹಶಿಕ್ಷಕಿ ಪ್ರಭಾ ಕಾರಂತ ವಂದಿಸಿದರು. ಸಹಶಿಕ್ಷಕ ಮನೋಹರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.