


ಡೈಲಿ ವಾರ್ತೆ: 13/ಜುಲೈ/2025


ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ

ರಾಯಚೂರು: ಮಂತ್ರಾಲಯಕ್ಕೆ ಬಂದಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ನಾಪತ್ತೆ ಆಗಿರುವಂತಹ ಘಟನೆ ನಡೆದಿದೆ.
ಅಜಿತ್(19), ಸಚಿನ್(20) ಮತ್ತು ಪ್ರಮೋದ್(20) ನಾಪತ್ತೆಯಾದವರು.
ಮೂವರು ಯುವಕರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾಗಿದ್ದು, ಡಿಗ್ರಿ ಓದುತ್ತಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭಾರಿ ಮಳೆಯಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಕಾರ್ಯಚರಣೆಗೆ ಅಡಚಣೆ ಉಂಟಾಗಿದ್ದು, ಬೆಳಗ್ಗೆ 10 ಗಂಟೆ ಬಳಿಕ ಮಂತ್ರಾಲಯ ಪೊಲೀಸರು, ಶ್ರೀಮಠದ ಸಿಬ್ಬಂದಿ ಮತ್ತೆ ಪತ್ತೆ ಕಾರ್ಯ ಆರಂಭಿಸಿದ್ದಾರೆ.