


ಡೈಲಿ ವಾರ್ತೆ: 13/ಜುಲೈ/2025


ದೇರಳಕಟ್ಟೆ: ಬೊಲೆರೋ ಜೀಪು ಡಿಕ್ಕಿ – ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

ಉಳ್ಳಾಲ: ವೇಗವಾಗಿ ಧಾವಿಸುತ್ತಿದ್ದ ಬೊಲೆರೋ
ಜೀಪೊಂದು ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ದೇರಳಕಟ್ಟೆಯ ಪ್ಲಾಮಾ ನೆಸ್ಟ್ ವಾಣಿಜ್ಯ ಸಂಕೀರ್ಣದಲ್ಲಿ ನೆಲೆಸಿದ್ದ ಮೂಲತಃ ಕೇರಳ ನಿವಾಸಿಯಾದ ಶ್ರೀಕಮಲ ಗೋಪಕುಮಾರ್(56) ಮೃತಪಟ್ಟ ಮಹಿಳೆ.
ಮೃತ ಶ್ರೀಕಮಲ ಅವರ ಪುತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ತಾಯಿ ಮಗಳು ದೇರಳಕಟ್ಟೆಯ ವಾಣಿಜ್ಯ ಸಂಕೀರ್ಣದಲ್ಲಿ ವಾಸವಿದ್ದರು. ಶ್ರೀಕಮಲ ಅವರು ತನ್ನ ವಸತಿ ಸಂಕೀರ್ಣದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ನಡೆದಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.