


ಡೈಲಿ ವಾರ್ತೆ: 14/ಜುಲೈ/2025


ವಿದ್ಯುತ್ ಶಾರ್ಟ್ ಸರ್ಕೂಟ್ ಯಿಂದ ತಂದೆ, ಮಗ ಸಾವು!

ಹರಪನಹಳ್ಳಿ: ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ತಂದೆ, ಮಗ ಸಾವನ್ನಪ್ಪಿರುವ ಘಟನೆ ತಾಲೂಕಿನ ದುಗ್ಗಾವತಿ ಗ್ರಾಮದ ನಡೆದಿದೆ.
ಮೃತರು ಗ್ರಾಮದ ಹಲಗಿ ರಮೇಶ (38), ಹಾಗೂ ಅವರ ಮಗ ಹಲಗಿ ಚಂದ್ರು (15) ಎಂದು ಗುರುತಿಸಲಾಗಿದೆ.
ದುಗ್ಗಾವತಿಯ ಶಾಮನೂರು ಶುಗರ್ ಕಾರ್ಖಾನೆಯ ಪಕ್ಕದ ಅಡಿಕೆ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ
ಜಮೀನಿನಲ್ಲಿ ಸುತ್ತಿದ್ದ ತಂತಿ ಮೇಲೆ ಜೆಸ್ಕಾಂ ಲೈನ್ ಸಂಪರ್ಕ ಲೈನ್ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿದೆ. ಅಲ್ಲದೇ ಮಳೆಯಾಗಿದ್ದರಿಂದ ಸುತ್ತಲಿನ ಪ್ರದೇಶಕ್ಕೂ ವಿದ್ಯುತ್ ಆವರಿಸಿದೆ. ಈ ಬಗ್ಗೆ ಅರಿವಿಲ್ಲದೇ ವಿದ್ಯುತ್ ಕಂಬದ ಬಳಿ ತೆರಳಿದ್ದ ತಂದೆ- ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ದಾವಿಸಿದ ಜೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಯನ್ನು ಸರಿಪಡಿಸಿದರು. ಘಟನೆಗೆ ಶಾಮನೂರು ಶುಗರ್ಸ್ ಕಾರ್ಮಿಕರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದೆ.
ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.