ಡೈಲಿ ವಾರ್ತೆ: 16/ಜುಲೈ/2025

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ನೂತನ ಅಧ್ಯಕ್ಷರಾಗಿ
ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಆಯ್ಕೆ

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಾದ, ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ, ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದಿನ ವ್ಯವಸ್ಥಾಪನ ಸಮಿತಿಯ ಆಡಳಿತ ಮಂಡಳಿಯ ಸದಸ್ಯರು, ವಡ್ಡರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ಸವ ಸಮಿತಿಯ ಅಧ್ಯಕ್ಷರು ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ನಿವೃತ್ತ ಅಧ್ಯಾಪಕರೂ ಆದ ವಡ್ಡರ್ಸೆ ಹಾಡಿಮನೆ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಇವರು ಆಯ್ಕೆ ಆಗಿರುತ್ತಾರೆ.

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಕಾರ್ಯದರ್ಶಿಯಾಗಿ ಲಯನ್ ಚಂದ್ರ ಶೆಟ್ಟಿ ಯಾಳಕ್ಲು ಮತ್ತು ನೂತನ ಕೋಶಾಧಿಕಾರಿಯಾಗಿ ಲಯನ್ ನಿತೀಶ್ ಆಚಾರ್ ಮಧುವನ ಇವರು ಆಯ್ಕೆಯಾಗಿರುತ್ತಾರೆ.

ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಲಯನ್ ಮಹೇಂದ್ರ ಆಚಾರ್ ಮಧುವನ, ಕ್ಲಬ್ ಸರ್ವಿಸ್ ಚೇರ್ ಮೆನ್ ಆಗಿ ಲಯನ್ ಅಜಿತ್ ಕುಮಾರ್ ಶೆಟ್ಟಿ ಕೊತ್ತಾಡಿ, ಕ್ಲಬ್ ಮೆಂಬರ್ ಶಿಪ್ ಕಮಿಟಿ ಚೇರ್ ಮೆನ್ ಆಗಿ ಲಯನ್ ಬನ್ನಾಡಿ ಶರತ್ ಶೆಟ್ಟಿ, ಕ್ಲಬ್ ಎಲ್.ಸಿ.ಐ.ಎಫ್ ಕೋ-ಆರ್ಡಿನೇಟರ್ ಆಗಿ ಲಯನ್ ಕರುಣಾಕರ ಶೆಟ್ಟಿ ಶಿರಿಯಾರ, ಲಯನ್ ಟೇಮರ್ ಆಗಿ ಲಯನ್ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ ಮತ್ತು ಲಯನ್ ಟೇಲ್ ಟ್ವಿಸ್ಟರ್ ಆಗಿ ಲಯನ್ ಅಚ್ಲಾಡಿ ಸುಧಾಕರ ಶೆಟ್ಟಿ ಆಯ್ಕೆಯಾಗಿರುತ್ತಾರೆ.

ಬೋರ್ಡ್ ಆಫ್ ಡೈರೆಕ್ಟರ್ ಆಗಿ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ, ಲಯನ್ ಪ್ರೊ| ಕಲ್ಕಟ್ಟೆ ಚಂದ್ರಶೇಖರ ಶೆಟ್ಟಿ, ಲಯನ್ ಉಪ್ಲಾಡಿ ಸುಗುಣಾಕರ ಶೆಟ್ಟಿ, ಲಯನ್ ಕೆ. ಸುಭಾಶ್ಚಂದ್ರ ಶೆಟ್ಟಿ ಬನ್ನಾಡಿ, ಲಯನ್ ಬನ್ನಾಡಿ ಪ್ರಭಾಕರ ಶೆಟ್ಟಿ, ಲಯನ್ ವಸಂತ್ ವಿ ಶೆಟ್ಟಿ ಎಮ್.ಜೆ.ಎಫ್ ಸೂರಿಬೆಟ್ಟು ಅಚ್ಲಾಡಿ, ಲಯನ್ ರಾಜೀವ್ ಶೆಟ್ಟಿ ಅಚ್ಲಾಡಿ, ಲಯನ್ Adv. ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ಲಯನ್ ರಾಜಾರಾಮ ಶೆಟ್ಟಿ ಕಲ್ಕಟ್ಟೆ, ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರು ಆಯ್ಕೆಯಾಗಿರುತ್ತಾರೆ.

ಕ್ಲಬ್ ಮೆಂಬರ್ಸ್ ಆಗಿ ಲಯನ್ ಸಂತೋಷ್ ಶೆಟ್ಟಿ ಕೂರಾಡಿ-ಬನ್ನಾಡಿ, ಲಯನ್ ಬಿ.ಬಿ ಜೀವನ್, ಲಯನ್ ಗುಂಡು ಶೆಟ್ಟಿ ಮಾನಂಬಳ್ಳಿ, ಲಯನ್ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿ (ಟಿ.ಸಿ.ಬಿ), ಲಯನ್ ರವಿರಾಜ್ ಶೆಟ್ಟಿ ವಡ್ಡರ್ಸೆ, ಲಯನ್ Adv. ಬನ್ನಾಡಿ ವಿನಯ್ ಶೆಟ್ಟಿ, ಲಯನ್ ಲಕ್ಷ್ಮಣ್ ಶೆಟ್ಟಿ ಕೊಮೆ ಅಚ್ಲಾಡಿ, ಲಯನ್ ರಂಜಿತ್ ಶೆಟ್ಟಿ ಯಾಳಕ್ಲು, ಲಯನ್ ಶರತ್ ಕುಮಾರ್ ಶೆಟ್ಟಿ ಕೊಮೆ, ಲಯನ್ ವಡ್ಡರ್ಸೆ ನವೀನ್ ಶ್ಯಾನುಭಾಗ್, ಲಯನ್ ಅಶ್ವತ್ ಶೆಟ್ಟಿ ಸೂರಿಬೆಟ್ಟು, ಲಯನ್ ಸುಭಾಸ್ ಶೆಟ್ಟಿ ಮಧುವನ, ಲಯನ್ Er. ಪ್ರಶಾಂತ್ ಶೆಟ್ಟಿ, ಲಯನ್ ಉಲ್ಲಾಸ್ ಶೆಟ್ಟಿ ಕಾವಡಿ, ಲಯನ್ Adv. ರಾಜು ಪೂಜಾರಿ ಬನ್ನಾಡಿ, ಲಯನ್ ಸುದೇಶ್ ಶೆಟ್ಟಿ ಶಾನಾಡಿ, ಲಯನ್ ದೀಪಕ್ ಶೆಟ್ಟಿ ಬನ್ನಾಡಿ, ಲಯನ್ ಶೇಖರ್ ಶೆಟ್ಟಿ ಕೂರಾಡಿ ಮತ್ತು ಲಯನ್ ಸಂತೋಷ್ ಶೆಟ್ಟಿ ಕೂರಾಡಿ (ಸಿ.ಎ.ಬಿ) ಆಯ್ಕೆಯಾಗಿರುತ್ತಾರೆ ಎಂದು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕ ಅಧ್ಯಕ್ಷರಾದ ಲಯನ್ Adv. ಬನ್ನಾಡಿ ಸೋಮನಾಥ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜು. 27 ರಂದು ಸಂಜೆ 6:30 ಗಂಟೆಗೆ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ “ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನ” ಬನ್ನಾಡಿ ಇಲ್ಲಿ ಜರುಗಲಿದ್ದು ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್.ಎಮ್. ಹೆಗ್ಡೆ ಎಮ್.ಜೆ.ಎಫ್ ಪದಪ್ರಧಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.