ಡೈಲಿ ವಾರ್ತೆ: 16/ಜುಲೈ/2025

ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ 5ನೇ ವಾರ್ಡಿನ ರಸ್ತೆ ಕಾಂಕ್ರೀಟೀಕರಣ ಹಾಗೂ ಚರಂಡಿ ರಚನೆ: ಸಂಸದ ಕೋಟ ಅವರಿಂದ ಪರಿಶೀಲನೆ

ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಮಹೇಶ್ ಹೋಟೆಲ್ ಮುಂಭಾಗ ಪರಿಶಿಷ್ಟ ಜಾತಿ ಪಂಗಡ ಮನೆಗಳ ಕಡಲ ಕಿನಾರಗೆ ಸಂಪರ್ಕಿಸುವ ಸುಮಾರು 300 ಮೀಟರ್ ರಸ್ತೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಪರಿಶೀಲಿಸಿದರು.


ಹಿಂದಿನ ಬಿಜೆಪಿ ಸರಕಾರದ ಅವಧಿಯ ಸಮಾಜಕಲ್ಯಾಣ ಇಲಾಖೆಯಿಂದ ಸುಮಾರು 60ಲಕ್ಷ ರೂ ಅನುದಾನದಡಿ ನಿರ್ಮಾಣಗೊಂಡ ಸಾಕಷ್ಟು ಪರಿಶಿಷ್ಟ ಜಾತಿ ಪಂಗಡದ ಮನೆಗಳಿರುವ ಹಾಗೂ ಪ್ರವಾಸಿ ಕಡಲ ಕಿನಾರ ಕೇಂದ್ರವಾಗಿರುವ ಈ ವ್ಯಾಪ್ತಿಯ ಬಹುವರ್ಷದ ಬೇಡಿಕೆ ಸಾಕಾರಗೊಳಿಸಿದ ಹಿನ್ನಲ್ಲೆಯಲ್ಲಿ ಗ್ರಾಮಸ್ಥರು ಆಗಿನ ಸಮಾಜಕಲ್ಯಾಣ ಸಚಿವ ಪ್ರಸ್ತುತ ಸಂಸದರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಕಾಮಗಾರಿಯು ನಿರ್ಮಿತಿಕೇಂದ್ರದ ಮೂಲಕ ಅನುಷ್ಠಾನಗೊಳಿಸಿದ್ದು ರಸ್ತೆ ಗುಣಮಟ್ಟವನ್ನು ಸಂಸದರು ಪರಿಶೀಲಿಸಿ ಅನುದಾನಕ್ಕಾಗಿ ಹಗಲಿರುಳು ಶ್ರಮಿಸಿದ ವಾಡ್೯ ಸದಸ್ಯೆ ವಿದ್ಯಾ ಸಾಲಿಯಾನ್ ಇವರ ಕಾರ್ಯವೈಕರಿಯನ್ನು ಸಂಸದರು ಪ್ರಶಂಸಿದರು.
ಈ ವೇಳೆ ಗ್ರಾಮಸ್ಥರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ವಾಡ್೯ಸದಸ್ಯೆ ವಿದ್ಯಾ ಸಾಲಿಯಾನ್, ಪಂಚಾಯತ್ ಸದಸ್ಯರಾದ ಸೀತಾ, ಪ್ರಮೋದ್ ಹಂದೆ, ವಾಸು ಪೂಜಾರಿ, ಜ್ಯೋತಿ , ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಅಶ್ವಿನಿ ದಿನೇಶ್, ಮಾಜಿ ಅಧ್ಯಕ್ಷರಾದ ವಿಶ್ವಪ್ರಕಾಶನಿ ಹಂದೆ, ರಘು ತಿಂಗಳಾಯ, ಮಾಜಿ ಪಂಚಾಯತ್ ಪ್ರತಿನಿಧಿ ರಾಮ ಬಂಗೇರ, ರಮಾನಂದ, ನಿರ್ಮಿತಿ ಕೇಂದ್ರದ ಗಣೇಶ್ ಶೆಟ್ಟಿ ,ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.