


ಡೈಲಿ ವಾರ್ತೆ: 16/ಜುಲೈ/2025


ಜಯಪ್ರಕಾಶ್ ಹೆಗ್ಡೆಯವರು ಮೀನುಗರಿಕಾ ಸಚಿವರಾಗಿದ್ದ ದಿನಗಳಲ್ಲಿ ಮೀನುಗಾರರ ಕಷ್ಟಗಳಿಗೆ ತೀವ್ರ ಪ್ರತಿಸ್ಪಂದನೆಯಿತ್ತು – ನಾಗೇಂದ್ರ ಪುತ್ರನ್

ಇಂದಿನ ರಾಜಕೀಯ ಧುರುಣರಿಗೆ ಮೀನುಗಾರರ ಸಂಕಷ್ಟಗಳ ಬಗ್ಗೆ ಕಾಳಜಿ ಕಡಿಮೆಯಾಗಿದೆ.
ಗಂಗೊಳ್ಳಿಯ ಟ್ರಾಲ್ ಬೋಟ್ ದುರಂತದಲ್ಲಿ ಮೂವರು ಮೀನುಗಾರರು ಪ್ರಾಣತೆತ್ತ ಈ ದುಃಖದ ಸನ್ನಿವೇಶದಲ್ಲಿ ಹಿರಿಯ ಧುರೀಣ ನಾಗೇಂದ್ರ ಪುತ್ರನ್ ದಶಕಗಳ ಹಿಂದಿನ ಜಯಪ್ರಕಾಶ್ ಹೆಗ್ಡೆಯವರು ಮೀನುಗಾರಿಕಾ ಸಚಿವರಾಗಿದ್ದ ಸಮಯದ ಸ್ಮರಣೆಯನ್ನು ಮಾಡಿದ್ದಾರೆ.
ಅಂದಿನ ದಿನಗಳಲ್ಲಿ ಮೀನುಗಾರರಿಗೆ ಯಾವುದೇ ಸರಕಾರಿ ಸೌಲಭ್ಯಗಳು ವಿಮ ಪರಿಹಾರಗಳು ಈಗಿನಷ್ಟು ಇರದ ದಿನಗಳಲ್ಲಿ ಸಚಿವ ಹೆಗ್ಡೆ ಇವರು ಮೀನುಗಾರರಿಗೆ ಸಂಕಷ್ಟ ಒದಗಿದಾಗ ಮುಂದೆ ನಿಂತು ಪ್ರತಿಸ್ಬಂಧನೆ ನೀಡಿದ್ದಾರೆ ಎಂದು ಕೋಟ ನಾಗೇಂದ್ರ ಪುತ್ರನ್ ವ್ಯಥೆ ಪಟ್ಟಿದ್ದಾರೆ.
ಹೌದು: ಗಂಗೊಳ್ಳಿಯಲ್ಲಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು ಬಹಳ ವಿಷಾದದ ಸಂಗತಿ.
ಜಗತ್ತು ದಿನದಿಂದ ದಿನಕ್ಕೆ ಮುಂದುವರಿಯುತ್ತಿದ್ದರು ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತಲೆ ಇದೆ. ರಾಜಕೀಯ ನಾಯಕರುಗಳು ಕೂಡ ಮೀನಗಾರರ ಸುರಕ್ಷತೆಯ ಬಗ್ಗೆ ತಲೆ ಕೆಡಿಸಿಕೊಂಡತಿಲ್ಲ.
ಈ ಕ್ಷಣಕ್ಕೆ ಜಯಪ್ರಕಾಶ್ ಹೆಗ್ಡೆಯವರು ನೆನಪಾಗುತ್ತಾರೆ.
ಕೆಲವೆ ವರ್ಷಗಳ ಆಡಳಿತವಧಿಯಲ್ಲಿ ಮೀನುಗಾರರ ಬಗ್ಗೆ ಕಾಳಜಿ ಜೊತೆ ಅವರ ಸುರಕ್ಷೆ ಬಗ್ಗೆ ದೊಡ್ಡ ಕನಸು ಕಂಡವರು.
ಅವರು ಮೀನುಗಾರಿಕಾ ಸಚಿವರಾಗಿದ್ದಾಗ ಗಂಗೊಳ್ಳಿಯಲ್ಲೊಂದು ಬೋಟ್ ಮಗುಚಿ ಹನ್ನೊಂದುಕ್ಕು ಹೆಚ್ಚು ಮಂದಿ ದಾರುಣ ಸಾವನ್ನಪ್ಪಿದ್ದರು.
ಆ ಕಾಲದಲ್ಲಿ ಮೀನುಗಾರರಿಗೆ ಯಾವುದು ವಿಮೆಗಳಾಗಲಿ, ಸರ್ಕಾರಿ ಸೌಲಭ್ಯಗಳು ಇಲ್ಲದಿರುವಾಗ, ಎಲ್ಲಾ ಹನ್ನೊಂದು ಮಂದಿಯ ಪರಿವಾರದ ಜೊತೆ ಹೆಗ್ಡೆಯವರು ನಿಂತಿದ್ದರು. ಅಂದು ಮೀನುಗಾರನೊಬ್ಬ ಮೀನುಗಾರಿಕೆ ಮಾಡುವಾಗ ಮರಣ ಹೊಂದಿದರೆ ಆತನ ಕುಟುಂಬಕ್ಕೆ ಸರ್ಕಾರದ ಹಣವನ್ನ ಮೊದಲು ಮಂಜೂರು ಮಾಡಿದ್ದು ಹೆಗ್ಡೆಯವರು.
ಮಳೆಗಾಲದ ಕಡಲ್ಕೊರೆತದ ಸಮಸ್ಯೆಗು ತಡೆಗೊಡೆಗಳನ್ನ ನಿರ್ಮಿಸುವ ಪ್ಲಾನ್ ಕೂಡ ರಚಿಸಿ ಅವರ ಅವಧಿಯಲ್ಲಿ ಹಲವು ಕಡೆ ಅದನ್ನ ಅನುಷ್ಟಾನಕ್ಕೂ ತಂದಿದ್ದರು.
ಆದರೆ ಈಗ ಎಲ್ಲಾ ನಾಯಕರದ್ದು ಒಂದೆ ಹೇಳಿಕೆ ‘ಮಂಗಳೂರಿಂದ ಕಾರವಾರದ ತನಕವು ಶಾಶ್ವತ ತಡೆಗೊಡೆ ಮುಂದಿನ ಸಲ ಪ್ರಾರಂಭಿಸಲಿದ್ದೇವೆ’
ಶ್ರಮಜೀವಿ ಮೀನುಗಾರರ ಬಗ್ಗೆ ಜಯಪ್ರಕಾಶ್ ಹೆಗ್ಡೆಯವರಿಗಿದ್ದಷ್ಟು ಕಾಳಜಿ ಈಗಿನ ಧುರೀಣರಿಗಿಲ್ಲ – ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ರಿಂದ ಗತ ದಿನಗಳ ಸ್ಮರಣೆ