ಡೈಲಿ ವಾರ್ತೆ: 18/ಜುಲೈ/2025

ಹೆಮ್ಮಾಡಿಯಲ್ಲಿ ಸಮಾನ ಮನಸ್ಕರಿಂದ ನೂತನ ಯಂಗ್‌ಸ್ಟಾರ್ ವೆಲ್‌ಫೇರ್ ಟ್ರಸ್ಟ್ (ರಿ) ಸ್ಥಾಪನೆ

ಕುಂದಾಪುರ| ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಹೆಮ್ಮಾಡಿ ಗ್ರಾಮದ, ಸಂತೋಷನಗರದಲ್ಲಿ ವಾಸವಾಗಿರುವ ಸಮಾನ ಮನಸ್ಕರು ಸೇರಿ ನೂತನ ಟ್ರಸ್ಟ್ ಸ್ಥಾಪನೆ ಮಾಡಲಾಯಿತು.

ಟ್ರಸ್ಟಿನ ಧೈಯೋದ್ಧೇಶಗಳು:
ಈ ಟ್ರಸ್ಟ್‌ ನಿಂದ ಆರ್ಥಿಕವಾಗಿ ಹಿಂದುಳಿದವರ ಮದುವೆಗೆ ಆರ್ಥಿಕ ಸಹಾಯ, ಬಡ ರೋಗಿಗಳಿಗೆ ವೈದ್ಯಕೀಯ ಖರ್ಚುಗಳಿಗೆ ಆರ್ಥಿಕ ಸಹಾಯ, ಸಾರ್ವಜನಿಕ ಶಿಕ್ಷಣ ಸಂಸ್ಥೆ, ಶಾಲಾ ಕಾಲೇಜು ಶಿಕ್ಷಣ ಸಂಸ್ಥೆ, ನಿರ್ಗತಿಕರಿಗೆ ಮತ್ತು ಅನಾಥರಿಗೆ ಅನಾಥಾಶ್ರಮ, ಬಡವರಿಗೆ ಆರ್ಥಿಕ ಸಹಾಯ. ಮತ್ತು ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹ ಅಲ್ಲದೇ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಅದಕ್ಕೆ ಸಂಬಂಧಪಟ್ಟ De ಕೆಳಗೆ ಧೈಯೋದ್ಧೇಶಗಳನ್ನು ಇಟ್ಟುಕೊಂಡು ಈ ಟ್ರಸ್ಟ್ ನ್ನು ಸ್ಥಾಪಿಸಲಾಗಿದೆ.

ಈ ಸಂದರ್ಭದಲ್ಲಿ ಯಂಗ್‌ಸ್ಟಾರ್ ವೆಲ್‌ಫೇರ್ ಟ್ರಸ್ಟಿನ ನೂತನ ಕಮಿಟಿ ರಚಿಸಲಾಯಿತು.

ಗೌರವಾಧ್ಯಕ್ಷ: ಕುಂದಾಪುರ ಸಯ್ಯದ್ ಇಕ್ಬಾಲ್ ಅಧ್ಯಕ್ಷ: ಶಾನವಾಜ್
ಪ್ರಧಾನ ಕಾರ್ಯದರ್ಶಿ: ಮೊಹಮ್ಮದ್ ಹಾರೀಸ್
ಕೋಶಾಧಿಕಾರಿ:
ರಿಯಾಜ್ ಶರೀಫ್
ಉಪಾಧ್ಯಕ್ಷ:ಝುಲ್ಪುಕಾರ್ ಜೊತೆ ಕಾರ್ಯದರ್ಶಿ:
ಮೊಹಮ್ಮದ್ ಮುನೀರ್

ಸದಸ್ಯರು:
ಆಶಿರ್, ಶಫಿವುಲ್ಲಾ, ಕೆ ಯೂಸೂಫ್, ಫರ್ಹಾನ್ ಅಹ್ಮದ್, ಹಾಗೂ ಫಾರೂಕ್ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.