


ಡೈಲಿ ವಾರ್ತೆ: 20/ಜುಲೈ/2025


ಕೇರಳ ಸಮಾಜಂ ವತಿಯಿಂದ ಸೆಪ್ಟಂಬರ್ 14 ರಂದು ಅದ್ದೂರಿ ಓಣಂ ಅಚರಣೆ

ಉಡುಪಿ: ಕೇರಳ ಸಮಾಜಂ ಉಡುಪಿ( ರಿ) ಸಂಘಟನೆ ವತಿಯಿಂದ ಸೆಪ್ಟಂಬರ್ 14 ರಂದು ಓಣಂ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯಲಿದೆ.ಉಡುಪಿಯ ಅಮ್ಮಣ್ಣಿ ರಮಣ್ಣ ಸಭಾಭವನದಲ್ಲಿ ಒಣಂ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಗೋವಾ ರಾಜ್ಯಪಾಲರಾದ ಶ್ರೀ ಪಿ ಎಸ್ ಶ್ರೀಧರನ್ ಪಿಳ್ಳೆ ಉದ್ಘಾಟಿಸಲಿದ್ದಾರೆ.ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ,ಜಿಲ್ಲಾದಿಕಾರಿ ಸ್ವರೂಪ ಟಿಕೆ,ಉಡುಪಿ ಪೊಲೀಸ್ ವರಿಷ್ಟಾಧಿಕಾರಿಗಳಾದ ಹರಿರಾಮ್ ಶಂಕರ್ ಪ್ರಸಿದ್ದ ಸಿನಿಮಾ ನಟರು ಹಾಗೂ ಗಣ್ಯರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಡೀ ದಿನದ ಓಣಂ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪೂಕಳಂ ಸ್ಪರ್ಧೆ,ಸಾಂಸ್ಕೃತಿಕ ಕಾರ್ಯಕ್ರಮಗಳು,ಓಣಂ ಸದ್ಯ(ಸಹಭೋಜನ) ಪ್ರಸಿದ್ದ ಚಲನ ಚಿತ್ರ ತಾರೆಯರಿಂದ ಕಾಮಿಡಿ ಶೋ,ಸಂಗೀತ ರಸಮಂಜರಿ ಹಾಗೂ ಬೈಂದೂರಿನ ಜಯ ಕೇರಳ ಕಳರಿ ಸಂಘಂ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ .