


ಡೈಲಿ ವಾರ್ತೆ: 23/ಜುಲೈ/2025


ಪಡುಬಿದ್ರಿ: ಮನೆಗೆ ನುಗ್ಗಿ ಮಹಿಳೆಯ ಕೊಲೆಗೆ ಯತ್ನ – ಆರೋಪಿ ಬಂಧನ

ಪಡುಬಿದ್ರಿ: ಹೈದರಾಬಾದ್‌ನಲ್ಲಿ ಉಚ್ಚಿಲದ ನಿವಾಸಿ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಆರೋಪಿ ವಿಶ್ವನಾಥ ನಾಯ್ಡು ಎಂಬಾತನು ಮಂಗಳವಾರದಂದು ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದ ಆ ಮಹಿಳೆಯ ಮನೆಯ ಬಾಗಿಲು ದೂಡಿ ಅಕ್ರಮ ಪ್ರವೇಶಿಸಿ ಆಕೆಯ ಕುತ್ತಿಗೆ ಹಿಡಿದು ಕೊಲ್ಲುವ ಯತ್ನ ನಡೆಸಿದ್ದಾಗ ಮಹಿಳೆಯ ಗಂಡ ಮತ್ತಿತರರು ಬಂದಾಗ ಆರೋಪಿಯು ಓಡಿ ಹೋದ ಘಟನೆಯು ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಬಳಿಕ ಆರೋಪಿಯನ್ನು ಉಚ್ಚಿಲದಲ್ಲೇ ಪಡುಬಿದ್ರಿ ಪಿಎಸ್‌ಐ ಶಕ್ತಿವೇಲು ಹಾಗೂ ಸಿಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತನನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.