


ಡೈಲಿ ವಾರ್ತೆ: 23/ಜುಲೈ/2025


ಎಸ್ ಡಿ ಪಿ ಐ ದೇರಳಕಟ್ಟೆ
ಬ್ಲಾಕ್ ಸಮಿತಿ ಮಾಸಿಕ ಸಭೆ

ಉಳ್ಳಾಲ : ಎಸ್.ಡಿ.ಪಿ.ಐ ದೇರಳಕಟ್ಟೆ ಬ್ಲಾಕ್ ಸಮಿತಿಯ ಮಾಸಿಕ ಸಭೆಯು ಬ್ಲಾಕ್ ಅಧ್ಯಕ್ಷರಾದ ಕಮರುದ್ದೀನ್ ಮಲಾರ್ ರವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆಯ ಪಕ್ಷದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಝಾಹಿದ್ ಮಲಾರ್ ಕ್ಷೇತ್ರ ಕಾರ್ಯದರ್ಶಿ ಉಭೈದ್ ಅಮ್ಮೆಂಬಳ ಕ್ಷೇತ್ರ ಕಾರ್ಯದರ್ಶಿ ಹಾಗೂ ಬ್ಲಾಕ್ ಉಸ್ತುವಾರಿ ಆರೀಫ್ ಬೋಳಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಮುಖ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬುವಂತೆ,ಸದಸ್ಯತ್ವ ವಿಸ್ತರಣೆ,ವಿವಿಧ ಘಟಕಗಳ ಶಕ್ತಿಕೇಂದ್ರಿತ ಚಾಲನೆ,ಸಾರ್ವಜನಿಕ ಜಾಗೃತಿ ಅಭಿಯಾನಗಳು ಹಾಗೂ ರಾಜಕೀಯ ಚಟುವಟಿಕೆಗಳ ಬಗ್ಗೆ ವಿವರಣೆ ಚರ್ಚೆ ನಡೆಯಿತು.
ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗುತ್ತಿದ್ದು ಇದರಿಂದ ಹಲವು ಪ್ರದೇಶಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಹಾರ ವಿಷಯಗಳ ಕುರಿತು ಮಾತುಕತೆಯ ಬಗ್ಗೆ ಪ್ರಧಾನವಾಗಿ ಚರ್ಚೆಯಾದವು.
ಈ ಸಭೆಯಲ್ಲಿ ಬ್ಲಾಕ್ ಸಮಿತಿಯ ಕಾರ್ಯದರ್ಶಿ ಝೈನುದ್ದೀನ್ ಹರೇಕಳ,ಜೊತೆ ಕಾರ್ಯದರ್ಶಿ ಶಮೀರ್ ಟಿಪ್ಪುನಗರ , ಸಂಘಟನಾ ಕಾರ್ಯದರ್ಶಿ
ಇಬ್ರಾಹಿಂ ಹರೇಕಳ, ಕೋಶಾಧಿಕಾರಿ ಜಾಫರ್ ಪಾಣೇಲ , ಸಮಿತಿ ಸದಸ್ಯರುಗಳಾದ ರಹಿಮಾನ್ ಬೋಳಿಯಾರ್ , ಅಝೀಝ್ ಬೋಳಿಯಾರ್, ನವಾಝ್ ಕುತ್ತಾರ್ ಹಾಗೂ ಗ್ರಾಮ ಸಮಿತಿಯ ನಾಯಕರುಗಳು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಪಕ್ಷದ ಮುಂದಿನ ಹೆಜ್ಜೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಶಮೀರ್ ಟಿಪ್ಪುನಗರ ಸ್ವಾಗತಿಸಿದರು ಝೈನುದ್ದೀನ್ ಹರೇಕಳ ಧನ್ಯವಾದಗೈದರು.