


ಡೈಲಿ ವಾರ್ತೆ: 24/ಜುಲೈ/2025


ಹಿರಿಯ ಕಂಬಳದ ಮುಂದಾಳು, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ವೆಂಕಟ ಪೂಜಾರಿ ಸಸಿಹಿತ್ಲು ನಿಧನ

ಬೈಂದೂರು: ಧಾರ್ಮಿಕ ಮುಖಂಡರು, ಜಿಲ್ಲೆಯ ಹಿರಿಯ ಕಂಬಳದ ಮುತ್ಸದಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಇದರ ನಿರ್ದೇಶಕರಾದ ವೆಂಕಟ ಪೂಜಾರಿ ಸಸಿಹಿತ್ಲು ಬುಧವಾರ ನಿಧನರಾದರು, ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರ ಗುರುವಾರ ಬೆಳಿಗ್ಗೆ 8 ಗಂಟೆಗೆ ವಿದಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣುಮಕ್ಕಳು, ಕುಟುಂಬದವರನ್ನು ಹಾಗೂ ಕಂಬಳದ ಅಭಿಮಾನಿಗಳನ್ನು ಅಗಲಿದ್ದಾರೆ.