


ಡೈಲಿ ವಾರ್ತೆ: 24/ಜುಲೈ/2025


ಕುಂದಾಪುರ: ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಬಿದ್ದ ಬೃಹತ್ ಗಾತ್ರದ ಮರ – ಚಾಲಕ ಗಂಭೀರ ಗಾಯ

ಕುಂದಾಪುರ: ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಚಾಲಕ ಗಂಭೀರ ಗಾಯ ಗೊಂಡ ಘಟನೆ ಜು.24 ರಂದು ಗುರುವಾರ ಮುಂಜಾನೆ ಹಾಲಾಡಿ – ಕೋಟೇಶ್ವರ ರಸ್ತೆಯ ಕಟ್ಕೆರೆ ಎಂಬಲ್ಲಿ ಸಂಭವಿಸಿದೆ.

ಗಂಭೀರ ಗಾಯಗೊಂಡ ಪಿಕಪ್ ವಾಹನದ ಚಾಲಕ ಹರೀಶ್ ಆನಗಳ್ಳಿ ಎಂದು ಗುರುತಿಸಲಾಗಿದೆ.
ಹರೀಶ್ ಆನಗಳ್ಳಿ ಎಂಬುವರು ಎಂದಿನಂತೆ ಪಿಕಪ್ ವ್ಯಾನ್ ಚಲಾಯಿಸಿಕೊಂಡು ಕಟ್ಕೆರೆ ಸಮೀಪ ಹೋಗುತ್ತಿರುವಾಗ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಪಿಕಪ್ ವಾಹನದ ಮೇಲೆ ಬಿದ್ದಿದೆ.
ವಾಹನದೊಳಗೆ ಸಿಲುಕಿಕೊಂಡಿರುವ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ಹೊರ ತೆಗೆದಿದ್ದಾರೆ. ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.