


ಡೈಲಿ ವಾರ್ತೆ: 28/ಜುಲೈ/2025


ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರ ನಲ್ಲಿ ಮಾದಕ ವಸ್ತುಗಳ ಸೇವನೆಯಿಂದ ದುಷ್ಪರಿಣಾಮ ಅರಿವು ಕಾರ್ಯಕ್ರಮ

ಬ್ರಹ್ಮಾವರ: ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರ ನಲ್ಲಿ ನಡೆದ ಮಾದಕ ವಸ್ತುಗಳ ಸೇವನೆ ಯಿಂದ ಆಗುವ ದುಷ್ಪರಿಣಾಮದ ಜಾಗ್ರತಿ ಕಾರ್ಯಕ್ರಮದಲ್ಲಿ ಶ್ರೀ ಜಯಕುಮಾರ್. ಎ.ಎಸ್. ಐ. ಆರಕ್ಷಕ ಠಾಣೆ, ಬ್ರಹ್ಮಾವರ ರವರು ” ವಿದ್ಯಾರ್ಥಿ ಗಳೇ ನಿಮಗೆ ಜೀವಿಸುವ ಹಕ್ಕು ಇದೆ, ಮಾದಕ ವಸ್ತುಗಳ ಸೇವನೆ ಯಿಂದ ಆಗುವ ದುಷ್ಪರಿಣಾಮದ ಮಹತ್ವ ತಿಳಿದು ಕೊಳ್ಳಿ ” ಎಂದು ಮಕ್ಕಳ ಹಕ್ಕುಗಳ ಬಗ್ಗೆ ತಮ್ಮ ಮಾತು ಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ರವರು ಮಾದಕ ವಸ್ತುಗಳಿಂದ ದೂರ ಇರುವ ಪ್ರಮಾಣ ವಚನ ಮಕ್ಕಳಿಗೆ ಭೋದಿಸಿದರು.
ಹೈಸ್ಕೂಲ್ ಇಂಚಾರ್ಜ್ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್ ಮತ್ತು ಶಾಲೆಯ ವಿದ್ಯಾರ್ಥಿ ನಾಯಕ ಶ್ರೀಶ.ಡಿ. ಉಪಸ್ಥಿತರಿದ್ದರು.
ಮಾದಕ ವಸ್ತು ನಿಷೇಧ ಕುರಿತು ಜಾಗ್ರತೆ ಮೂಡಿಸಲು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವೈಷ್ಣವಿ ಶ್ರಾವಣ್ಯ, ಸಾನ್ವಿ, ಸಪ್ತಮಿ, ಆದ್ರಿಕಾ ಪ್ರಾರ್ಥನೆ ಮಾಡಿದರು, ರಿಧಿ ಸ್ವಾಗತಿಸಿ, ಶರಣ್ ಅತಿಥಿ ಗಳ ಪರಿಚಯವಾಚಿಸಿ, ಶ್ರೀಶ ಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ಶ್ರೀಪ್ರಭಾ ಧನ್ಯವಾದ ಸಲ್ಲಿಸಿದರು, ಶ್ರೀ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಕಿ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್ ಮತ್ತು ಶ್ರೀಮತಿ ಅಪರ್ಣ ಭಟ್ ಕಾರ್ಯಕ್ರಮ ಸಂಯೋಜನೆ ಮಾಡಿದರು. ಶಿಕ್ಷಕ-ಶಿಕ್ಷಕೇತರರು ಸಹಕರಿಸಿದರು.