ಡೈಲಿ ವಾರ್ತೆ: 29/ಜುಲೈ/2025

ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ಲೋಕಾಯುಕ್ತ ದಾಳಿ – ಭ್ರಷ್ಟ ಅಧಿಕಾರಿಗಳು ಶಾಕ್!

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ 4 ಜಿಲ್ಲೆಗಳಲ್ಲಿ 6 ಕಡೆ ದಾಳಿ ನಡೆಸಿದೆ.

ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬೆಂಗಳೂರಿನ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಸಿನಿಯರ್ ಅರ್ಟಿಕಲ್ಚರ್ ಡೈರೆಕ್ಟರ್, ಓಂ ಪ್ರಕಾಶ್‌, ರಾಷ್ಟ್ರೀಯ ಹೆದ್ದಾರಿ (NHAI) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜ್ಯೂನಿಯರ್ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.