ಡೈಲಿ ವಾರ್ತೆ: 29/ಜುಲೈ/2025

ಧರ್ಮಸ್ಥಳ ಮೃತದೇಹ ಹೂತ ಪ್ರಕರಣ: ಮೊದಲು ದಿನದ ಕಾರ್ಯಾಚರಣೆ ಅಂತ್ಯ – ಕಳೇಬರ ಸಿಗದೆ ವಾಪಾಸಾದ ಎಸ್.ಐ.ಟಿ.!

ಧರ್ಮಾಸ್ಟಳ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಮಿನಿ ಹಿಟಾಚಿ ಸತತ ಕಾರ್ಯಾಚರಣೆ ನಡೆಸಿದರೂ ಕಳೇಬರ ಸಿಗದೆ ಎಸ್.ಐ.ಟಿ.ತಂಡ ಹಿಂದಿರುಗಿದೆ.

13 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು. ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದರು. ಕಡೆಗೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು.

ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ 6 ಗಂಟೆಗೆ ಮುಕ್ತಾಯವಾಗಿದೆ. ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು ಕಾರ್ಯಾಚರಣೆ ಅಚ್ಚರಿ ಮೂಡಿದೆ.

ಸುಮಾರು 8 ಅಡಿ ಆಳ 15 ಅಡಿ ಅಗಲದಲ್ಲಿ ಕಳೇಬರಕ್ಕಾಗಿ ಸತತ 5 ತಾಸಿಗೂ ಅಧಿಕ ಹೊತ್ತು ಕಾರ್ಯಾಚರಣೆ ನಡೆಸಿದೆ.