


ಡೈಲಿ ವಾರ್ತೆ: 05/ಆಗಸ್ಟ್/ 2025


ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕುಂದಾಪುರ ಡಾ. ಸತೀಶ್ ಖಾರ್ವಿಗೆ ಚಿನ್ನದ ಪದಕ

ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರು ಮತ್ತು ಮಹಿಳೆಯರು ಕ್ಲಾಸಿಕ್ ಪವರ್‌ಲಿಸ್ಟಿಂಗ್ -2025ರ
ಆ. 02 ರಿಂದ 07 ರವರೆಗೆ ಕೋಝಿಕ್ಕೋಡ್ ಕೇರಳ ವಿ.ಕೆ. ಕೃಷ್ಣ ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ ಸತೀಶ್ ಖಾರ್ವಿ 1 ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ.

ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಬಾರವನ್ನು ಎತ್ತಿ 5ನೇ ರಾಷ್ಟ್ರೀಯ ನೂತನ ದಾಖಲೆ ಸ್ಥಾಪಿಸಿದ್ದಾರೆ.
ಅಲ್ಲದೆ ತನ್ನ ದಾಖಲೆ ತಾನೇ 4 ಬಾರಿ ಮುರಿದ ಹೆಗ್ಗಳಿಕೆ ಡಾ. ಸತೀಶ್ ಖಾರ್ವಿ ಅವರದ್ದು ಆಗಿದೆ.

ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕ್ರೀಡಾಪಟು ಆಗಿದ್ದ ಸತೀಶ್ ಖಾರ್ವಿ ಯವರು ಕುಂದಾಪುರದ ನ್ಯೂ ಹರ್ಕ್ಯುಲೇಸ್ ಜಿಮ್ ಮುಖ್ಯಸ್ಥರು ಹಾಗೂ ಕುಂದಾಪುರ ಘಟಕದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿರುತ್ತಾರೆ. 2019ರಲ್ಲಿ 210 ಕೆಜಿ, ಬಾರ ಎತ್ತಿ ದಾಖಲೆ,
2021ರಲ್ಲಿ 217.5 ಕೆ.ಜಿ ಭಾರ ಎತ್ತಿ ದಾಖಲೆ,
2022ರಲ್ಲಿ 220 ಕೆ.ಜಿ ಭಾರ ಎತ್ತಿ ದಾಖಲೆ,
2023ರಲ್ಲಿ 221 ಕೆಜಿ ಭಾರ ಎತ್ತಿ ದಾಖಲೆ,
2025ರಲ್ಲಿ 222.5 ಕೆ.ಜಿ ಭಾರ ಎತ್ತಿ ದಾಖಲೆ ನಿರ್ಮಿಸಿದ್ದಾರೆ.