


ಡೈಲಿ ವಾರ್ತೆ: 05/ಆಗಸ್ಟ್/ 2025


ಜೆಸಿಐ ಕುಂದಾಪುರ ಘಟಕದ ಸಂಸ್ಥಾಪನಾ ದಿನಾಚರಣೆ

ಕುಂದಾಪುರ: ಜೆಸಿಐ ಕುಂದಾಪುರ ಘಟಕದ ಸಂಸ್ಥಾಪನಾ ದಿನಾಚರಣೆಯು ಜೆಸಿಐ ಕುಂದಾಪುರ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಸಿ ಎಎಸ್‌ಎನ್ ಹೆಬ್ಬಾರ್ ಅವರ ಮನೆಯಲ್ಲಿ ನಡೆಯಿತು.
ಈ ವೇಳೆ ಸ್ಥಾಪಕ ಅಧ್ಯಕ್ಷರಾದ ಜೆಸಿಐ ಘಟಕದ ಸ್ಥಾಪಕ ಅಧ್ಯಕ್ಷರಾದ ಏಸ್‌ಎನ್ ಹೆಬ್ಬಾರ್ ಇವರು ಮಾತನಾಡಿ, ಜೆಸಿಐ ಕುಂದಾಪುರ ಘಟಕವನ್ನು ಸ್ಥಾಪಿಸಿದ ಬಗ್ಗೆ ಜೆಸಿಐನಲ್ಲಿ ಇರುವ ಪ್ರಯೋಜನದ ಬಗ್ಗೆ ವಿವರಿಸಿದರು.
ಇದೇ ವೇಳೆ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್” ಕಾರ್ಯಕ್ರಮದಡಿಯಲ್ಲಿ ಹಿರಿಯ ಪತ್ರಕರ್ತರಾದ ಎಎಸ್‍ಎನ್ ಹೆಬ್ಬಾರ್ ಹಾಗೂ ಯುಎಸ್ ಶಣೈ ಅವರನ್ನು ಸನ್ಮಾನಿಸಲಾಯಿತು. ಹಾಗೂ ಘಟಕದ ಪೂರ್ವಾಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಜೆಜೆಸಿ ಅಧ್ಯಕ್ಷ ಜೆಜೆಸಿ ರಥ್ವಿಕ್ ಯೋಜನಾಧಿಕಾರಿ ಜೆಸಿ ರವಿಚಂದ್ರ ಬಿಒ, ಕಾರ್ಯದರ್ಶಿ ಜೆಸಿ ಪ್ರವೀಣ್ ಎಂ, ನಿಕಟಪೂರ್ವದ್ಯಕ್ಷರಾದ ಜೆಸಿ ಚಂದನ್ ಗೌಡ, ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ, ಜೆಸಿಐ ಕುಂದಾಪುರದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಜೆಸಿ ಗೋಪಾಲ ಪೂಜಾರಿ ಹಾಗೂ ಜೆಸಿಐ ಕುಂದಾಪುರ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಸಿ ಎಎಸ್‌ಎನ್ ಹೆಬ್ಬಾರ್ ಹಾಗೂ ಧರ್ಮಪತ್ನಿ ಸುಧಾ ಹೆಬ್ಬಾರ್, ಜೆಸಿ ಚೇತನ್ ದೇವಾಡಿಗ ಉಪಸ್ಥಿತರಿದ್ದರು.