ಡೈಲಿ ವಾರ್ತೆ: 05/ಆಗಸ್ಟ್/ 2025

ಸಾಲಿಗ್ರಾಮ ಒಳಪೇಟೆ ಒತ್ತವರಿ ತೆರವು ಸಭೆಯಲ್ಲಿ ತಹಶಿಲ್ದಾರ್ ಭಾಗಿ – ಸರ್ವೆ ಕಾರ್ಯಕ್ಕೆ ಮಾತ್ರ ಸೀಮಿತವಾದ ಸಭೆ!
ಆ.6 ರಂದು ಸರ್ವೆಕಾರ್ಯಕ್ಕೆ ನಿಗದಿ

ಕೋಟ: ಸಾಲಿಗ್ರಾಮ ಒಳಪೇಟೆ ಟ್ರಾಫಿಕ್ ಸಮಸ್ಯೆ ಹಾಗೂ ಅಲ್ಲಿನ ರಸ್ತೆ ಅಗಲಿಕರಣಗೊಳಿಸುವ ಕುರಿತಂತೆ ಮಂಗಳವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು.

ಸಭೆಯ ಕುರಿತಂತೆ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಪ್ರಸ್ತಾವನೆ ಸಲ್ಲಿಸಿದರು.
ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಮಾತನಾಡಿ ಸಾಲಿಗ್ರಾಮ ಒಳಪೇಟೆ ಅಭಿವೃದ್ಧಿ ಕುರಿತಂತೆ ಸಂಬಂದಿಸಿದ ವರ್ತಕರು ಹಾಗೂ ಸ್ಥಳದ ಮುಖ್ಯಸ್ಥರು ಸಹಕಾರ ನೀಡಬೇಕು, ಒಳಪೇಟೆ ರಸ್ತೆ ಅಗಲಿಕರಣಗೊಳಿಸಿ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಕಡಿವಾಣಕ್ಕೆ ಕ್ರಮಕೈಗೊಳ್ಳಲಿದೆ ಅಲ್ಲದೆ ರಸ್ತೆ ಸಮೀಪವೇ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಗಳ ತೆರವಿಗೆ ಶೀಘ್ರ ಕಾರ್ಯೋನ್ಮುಖವಾಗಲಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯಗಳ ಆದ್ಯತೆ ನೀಡಲಾಗುವುದು ಎಂದರು.

ಈ ಬಗ್ಗೆ ಆಕ್ರೋಶ ಹೊರಹಾಕಿದ ವರ್ತಕರು ಎಷ್ಟು ಬಾರಿ ರಸ್ತೆ ಅಗಲಿಕರಣಗೊಳಿಸುತ್ತಿರಿ ಪ್ರತಿಬಾರಿ ಈ ರೀತಿಯ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗುತ್ತದೆ ಒಂದೆಡೆ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಇತ್ತ ಒಳ ಪೇಟೆ ಅಗಲಿಕರಣ ಹಾಗಾದರೆ ನಾವು ವಾಸ್ತವ್ಯ ಹೊಂದುವ ಬಯಕೆ ನಿಮ್ಮಗಿಲ್ಲವೇ ಇರುವುದು ಸಣ್ಣ ಸ್ಥಳ ಅದಕ್ಕೂ ಸಮಸ್ಯೆ ಸೃಷ್ಠಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಧಿಕಾರಿಗಳನ್ನು ತರಾಟೆ ತೆಗೆದು ಕೊಂಡ ನಾಗರಾಜ್ ಗಾಣಿಗ ರಸ್ತೆ ಈ ಹಿಂದೆ 10ಅಡಿ ಅಗಲದ ಹೊಂದಿದ್ದು ನಂತರದ ದಿನಗಳಲ್ಲಿ 18 ಅಡಿಗೆರಿದೆ ಇತ್ತೀಚಿಗಿನ ವರ್ಷಗಳಲ್ಲಿ ಅಭಿವೃದ್ಧಿಯೊಂದಿಗೆ ಇದೀಗ ಚರಂಡಿ ಸಹಿತ 39 ಅಡಿಗಳಾಗಿವೆ ಹಾಗಾದರೆ ನಾವ್ಯಾರು ಅಲ್ಲಿ ಇರಬಾರದೆ ಯಾರೋ ಒಬ್ಬ ಇಬ್ಬರಿಗೊಸ್ಕರ ಈ ವಿಚಾರವನ್ನಿಟ್ಟುಕೊಂಡು ಪದೆ ಪದೆ ರಸ್ತೆ ಅಗಲಿಕರಣಗೊಳಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಸರ್ವೆಗೆ ಮುಂದಾಗಿ ಆಗ್ರಹ:
ಸಭೆಯಲ್ಲಿ ಸೇರಿದ್ದ ವರ್ತಕರು ಮೊದಲು ಸ್ಪಷ್ಟವಾದ ಸರ್ವೆಕಾರ್ಯ ನಡೆಸಿ ಗುರುತು ಮಾಡಿ ಕೆಲವೊಂದು ಭಾಗದಲ್ಲಿರುವ ಮೇಲ್ಛಾವಣ ತೆಗೆಯಲು ನಮ್ಮ ಅಭ್ಯಂತರವಿಲ್ಲ ಬದಲಾಗಿ ಇನ್ನು ಕಟ್ಟಡ ತೆಗೆಯುವ ಆಲೋಚನೆ ಸರಿಯಲ್ಲ ಎಂದು ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ನಿಮ್ಮಗೆ ಸಮಸ್ಯೆ ನೀಡುವ ಉದ್ದೇಶವಲ್ಲ ಬದಲಾಗಿ ಹೆಚ್ಚಿನ ಪಟ್ಟಣಗಳು ಸಾಕಷ್ಟು ಅಭಿವೃದ್ಧಿಗೊಂಡಿವೆ ಹಾಗಾದರೆ ನಿಮ್ಮ ಪಟ್ಟಣಪಂಚಾಯತ್ ವ್ಯಾಪ್ತಿ ಅಭಿವೃದ್ಧಿಗೊಳ್ಳಬಾರದೆ ಎಂದು ಪ್ರಶ್ನಿಸಿ ನಾವು ಯಾರಿಗೂ ಸಮಸ್ಯೆ ಮಾಡುವುದಿಲ್ಲ ಬದಲಾಗಿ ಸಾಲಿಗ್ರಾಮವನ್ನು ಸುಂದರ ಪಟ್ಟಣವಾಗಿಸಲು ಯೋಜನೆ ರೂಪಿಸಲಿದೆ ಅಲ್ಲದೆ ಈ ಬಗ್ಗೆ ಬುಧವಾರ ಸರ್ವೆಕಾರ್ಯ ನಡೆಯಲಿದೆ ಸಹಕಾರ ನೀಡಿ ಎಂದರು.
ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ ಸಾಲಿಗ್ರಾಮ ಪೇಟೆಯ ವರ್ತಕರಿಗೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಿಎಂದರು.
ಮಾಜಿ ಅಧ್ಯಕ್ಷೆ ಸುಲತಾ ಹೆಗ್ಡೆ ಸರ್ವೆಕಾರ್ಯ ಪುನರ್ ಗೊಳಿಸಿ ತೆರವು ಕಾರ್ಯ ನಂತರ ಮಾಡಿ ಎಂದು ಸಲಹೆ ನೀಡಿದರು.

ಬುಧವಾರ ಸರ್ವೆಕಾರ್ಯಕ್ಕೆ ನಿಗದಿ:
ಪಟ್ಟಣಪಂಚಾಯತ್ ವ್ಯಾಪ್ತಿಯ ಸಾಲಿಗ್ರಾಮ ಒಳ ಪೇಟೆ ಸುಂದರಗೊಳಿಸಲು ಬುಧವಾರ ಮುಂಜಾನೆ ಪೋಲಿಸ್ ಇಲಾಖೆಯ ಸಹಕಾರ ಪಡೆದು ಕಂದಾಯ ಇಲಾಖೆಯ ಅಧಿಕಾರಿಗಳಸಮ್ಮುಖದಲ್ಲಿ ಸರ್ವೆಕಾರ್ಯ ನಡೆಯಲಿದೆ ನಿಮ್ಮ ಸಹಕಾರ ಅಗತ್ಯ ಎಂದು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ ಸಭೆಗೆ ಮಾಹಿತಿ ನೀಡಿದರು.
ಈ ವಿಚಾರಕ್ಕೆ ವರ್ತಕರು ಸಹಮತ ನೀಡಿದರು.
ಸಭೆಯಲ್ಲಿ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ ಇದ್ದರು.