ಡೈಲಿ ವಾರ್ತೆ: 05/ಆಗಸ್ಟ್/ 2025

ಮೊಳಹಳ್ಳಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು| ಕೋಟ ಪೊಲೀಸರಿಂದ ದಾಳಿ, 8 ಕ್ವಿಂಟಾಲ್‌ ಅಕ್ಕಿ ಜಪ್ತಿ!

ಕೋಟ: ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆಯ ಉದಯ ಎಂಬುವವರ ಮನೆಯ ಬಳಿ ಇರುವ ಗೋಡೌನ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರುವ ಸ್ಥಳಕ್ಕೆ ಕೋಟ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 8 ಕ್ವಿಂಟಾಲ್‌ಗೂ ಅಧಿಕ ಅಕ್ಕಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.

ಕೋಟ ಪೊಲೀಸರು ದಾಳಿ ನಡೆಸಿ ಗೋಡೌನೊಳಗೆ ಬಿಳಿ ಪಾಲಿಥೀನ್ ಚೀಲದಲ್ಲಿ ತುಂಬಿದ್ದ ಒಟ್ಟು 8 ಕ್ವಿಂಟಾಲ್ 45 ಕೆ ಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.