


ಡೈಲಿ ವಾರ್ತೆ: 11/ಆಗಸ್ಟ್/ 2025


ಧರ್ಮಸ್ಥಳ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ: ರಾಜಾಜ್ಞೆ ಆಗಿದೆ – ಅರಸನ ಅರಮನೆ ಕಾರ್ಮೊಡ ಕವಿದೀತು.!

ಗದಗ: ಧರ್ಮಸ್ಥಳದಲ್ಲಿ ನಡೆಯುವ ಘಟನೆ ಸುಳ್ಳಾ? ನಿಜಾನಾ? ಅದು ಈಗ ರಾಜಾಜ್ಞೆ ಆಗಿದೆ. ಪರಿಶೋಧನೆ ಒಳಪಟ್ಟಿದೆ. ಸತ್ಯಾಸತ್ಯತೆ ಬರುವವರೆಗೆ ಕಾಯಬೇಕು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಭಕ್ತರ ಮನೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ,” ಇದರಲ್ಲಿ ಇನ್ನೊಂದು ಅಪಪ್ರಚಾರ ಪ್ರಬಲವಾಗಿದೆ. ಅಪಪ್ರಚಾರ ಅದು ಕೊನೆಗೆ ಬರಬೇಕು, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ. ಪ್ರಚಾರ, ವಿಚಾರ, ಸಮಾಚಾರ, ಅಪಪ್ರಚಾರ. ಅಲಕರು ಹೇಳಿದವನಿಗೆ ಅಪಪ್ರಚಾರವೇ ಆಯುದ್ಧ, ಇದು ಈಗ ನಡೆಯುತ್ತಿದೆ. ಬಹುಶಃ ಮಂಜುನಾಥನೆ ಇದನ್ನೆಲ್ಲಾ ಮಾಡಿಸುತ್ತಿರಬೇಕು ಅನಿಸುತ್ತದೆ” ಎಂದರು.
ಸತ್ಯ ಹೊರಗೆ ಬರುವವರೆಗೆ ಕಾಯಬೇಕು. ಯಾರನ್ನು ದೋಷಿ ಮಾಡುವಂತಿಲ್ಲ. ಬೆಳಕು ಇದ್ದಲ್ಲಿ ಕತ್ತಲು ಇರುತ್ತೆ, ಕತ್ತಲು ಇದ್ದಲ್ಲಿ ಬೆಳಕು ಇರುತ್ತೆ. ಬೆಳಕು ಬಂದಾಗ ಕತ್ತಲು ಹೋಗುತ್ತದೆ. ಒಳೊಳ್ಳೆ ಗುಡಿಗಳ ದೇವರ ಪೂಜೆಗಳು ನಿಲ್ಲತ್ತವೆ ಎಂದು ಕಾಲಜ್ಞಾನಿಗಳು ಹೇಳಿದ್ದಾರೆ. ಎಲ್ಲಿ ನಿಧಿ ಇರುತ್ತೆ, ಅಲ್ಲಿ ವಿಧಿ ಇರುತ್ತೆ. ನಿಧಿ ಇದ್ರೆ ವಿಧಿ ಕೆಲಸ, ನಿಧಿ ಇಲ್ಲವಾದ್ರೆ ವಿಧಿ ಕೆಲಸವಿಲ್ಲ. ಊರೊಳಗಿರುವ ಸಣ್ಣ ದೇವಸ್ಥಾನಕ್ಕೆ ಯಾರೂ ಹೋಗಲ್ಲ. ನಿಧಿ ಇದ್ದಲ್ಲಿ ವಿಧಿ ಕಾಡುತ್ತೆ ಆದ್ರೆ ವಿಧಿ ಗೆಲ್ಲಬೇಕು” ಎಂದರು.
ಇನ್ನು ರಾಜ್ಯ ರಾಜಕಾರಣ ಕುರಿತು ಮಾತನಾಡಿದ ಶ್ರೀಗಳು, “ನಿನಗಾಗಿ ಪಡುವಣದಿ ರವಿ ಮೂಡುವನೆ.? ಶಕ್ತಿ ಇದ್ದರೆ ಗೆಲ್ಲು, ಇಲ್ಲವೇ ಹೊಂದಿಕೊ. ಇದನ್ನು ಬಿಡಿಸಿ ಹೇಳುವುದು ಕಷ್ಟ ಇದೆ. ಹೇಳಿದ್ರೆ ನಾವು ಊರು ಮುಟ್ಟಲ್ಲರಿ” ಎಂದು ಕೋಡಿಮಠ ಶ್ರೀ ನಗೆ ಬೀರಿದರು.
”ಇವತ್ತಿನ ರಾಜಕಾರಣ ಹೇಗಿದೆ ಅಂದ್ರೆ ದ್ವೇಷ, ಅಸೂಯೆ, ಮತ್ಸರದಿಂದ ಕೂಡಿದೆ. ಸತ್ಯ ಸ್ವೀಕರಿಸಲ್ಲ, ಅಸತ್ಯ ಸ್ವೀಕರಿಸುತ್ತಾರೆ. ಅದು ಅಪಾಯ. ಸತ್ಯ ಏನೋ ಆಗಿರುತ್ತೆ. ಅರಸನ ಅರಮನೆಗೆ ಕಾರ್ಮೋಡ ಕವಿದಿತು. ಕೇಂದ್ರ ಮತ್ತು ರಾಜ್ಯ ಎರಡರ ಬಗ್ಗೆಯೂ ಹೇಳುತ್ತೇನೆ. ಅಲ್ಲು- ಇಲ್ಲೂ ಎರಡು ಕಡೆ ಕೂಡಾ ತೊಂದರೆ ಇದೆ. ನಿಚಂಗೆ ದೊರೆತನವು, ಹೇಡಂಗೆ ಹಿರಿತನವು, ಮೂಢಂಗೆ ಗುರುತನವು ಜಗದಳಿವು ಕಾಣ ಎಂಬಂತೆ. ನೀಚನಾದವನು ದೊರೆ ಆದ್ರೆ, ಹೇಡಿ ಆದವನು ಮಿಲಿಟರಿ ಕರ್ನಲ್ ಆದ್ರೆ ದಡ್ಡನಾದವು ಗುರುವಾದ್ರೆ.? ಇವು ಮೂರು ಮುಖ್ಯ ದೇಶಕ್ಕೆ. ಹಿಂದೆ ರಾಜ ಮಹಾರಾಜರ ಪಕ್ಕ ಗುರುಗಳು ಕೂಡುತ್ತಿದ್ದರು. ಆಗ ಗುರಿ ಇತ್ತು, ಗುರು ಇದ್ದ ಮುಂದೆ ಆಳುತ್ತಿದ್ದರು. ಇವರಿಗೆ ಗುರುನೂ ಇಲ್ಲ, ಗುರಿಯೂ ಇಲ್ಲ. ಇಲ್ಲದೆ ಇರುವುದನ್ನು ಮಾತನಾಡಲು ಕಷ್ಟ ಆಗುತ್ತೆ” ಎಂದರು.
ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ತುಂಡು ಮಾಡ್ತಾನೆ. ಅವನ ಹೆಂಡತಿ ರಂಗ ಪ್ರವೇಶ ಮಾಡ್ತಾಳೆ. ಮಹಾ ಭಾರತದಲ್ಲಿ ಕೃಷ್ಣ ಇದ್ದ, ಭೀಮ ಗೆದ್ದ. ಈಗ ಕೃಷ್ಣಾ ಇಲ್ಲ ದುರ್ಯೋಧನ ಗೆಲ್ತಾನೆ. ಮೂಡಾ ಪ್ರಕರಣ ಬಂತು, ಬಿಲ್ ಕಟ್ ಮಾಡಿದ್ರು. ಅವನ ಹೆಂಡತಿ ಹೋಗಿ ರಂಗ ಪ್ರವೇಶ ಮಾಡಿ ವಾಪಸ್ ತಗೊಂಡು ಬಂದ್ಲು. ಮೂಡಾದಲ್ಲಿ ಸಿದ್ದರಾಮಯ್ಯ ಗೆದ್ದ. ಅಲ್ಲಿ ಕೃಷ್ಣ ಇದ್ದ ಭೀಮ ಗೆದ್ದ, ಇಲ್ಲಿ ದುರ್ಯೋಧನ ಅಂದ್ರೆ ರಾಜ ಗೆದ್ದ. ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಮೂಡಾ ಕೇಸಲ್ಲಿ ಗೆದ್ದ ದುರ್ಯೋಧನ ಎಂದರು.
ಇನ್ನು ಕೆ.ಎನ್. ರಾಜಣ್ಣ ರಾಜೀನಾಮೆ ರಾಜಕೀಯ ಪರ್ವ ವಿಚಾರವಾಗಿ ಮಾತನಾಡಿ, “ಅರಸನ ಅರಮನೆಗೆ ಕಾರ್ಮೋಡ ಕವಿದೀತು. ಕೆಂದ್ರ ಮತ್ತು ರಾಜ್ಯ ಎರಡರಲ್ಲೂ ಇದು ನಡೀತಾ ಇದೆ. ಅಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ಕೊಟ್ಟರು, ಇಲ್ಲಿ ಇವರೊಬ್ಬರು ಕೊಟ್ಟರು. ಕೆ.ಎನ್. ರಾಜಣ್ಣ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ರಾಜೀನಾಮೆ ಪರ್ವದ ಬಗ್ಗೆ ಹೇಳಿದ ಶ್ರೀಗಳು. ಸಂಕ್ರಾಂತಿವರೆಗೂ ಇದು ಇದ್ದೇ ಇರತ್ತೆ. ಅರಸನ ಅರಮನೆ ಕಾರ್ಮೊಡ ಕವಿದೀತು. ಯುಗಾದಿ ಭವಿಷ್ಯದಂತೆ ಮಳೆ, ಬೆಳೆ, ವ್ಯಾಪಾರಗಳ ಕುರಿತು ಹೇಳಿದ್ವಿ. ನಾಲ್ಕು ಸುನಾಮಿಗಳು ನಡೆಯುತ್ತವೆ. ಭೂ ಸುನಾಮಿ, ವಾಯು ಸುನಾಮಿ, ಜಲ ಸುನಾಮಿ, ಪ್ರಕೃತಿ ಸುನಾಮಿ ನಡೆಯುತ್ತಿವೆ’ ಎಂದರು.