



ಡೈಲಿ ವಾರ್ತೆ: 15/ಆಗಸ್ಟ್/ 2025


ಎಂ. ಕೋಡಿ ಬಿಲಾಲ್ ಜಾಮಿಯಾ ಜುಮ್ಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ:ಬಿಲಾಲ್ ಜಾಮಿಯಾ ಜುಮ್ಮಾ ಮಸೀದಿ ಎಂ. ಕೋಡಿ ಕುಂದಾಪುರದಲ್ಲಿ 79 ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಖತೀಬರಾದ ಅಬ್ದುಲ್ ರಹ್ಮಾನ್ ಸಖಾಫಿ ಇವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.

ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಹಾಗೂ ಮದರಸ ಮಕ್ಕಳು ಮತ್ತು ಜಮಾತ್ ಭಾಂದವರು ಉಪಸ್ಥಿತರಿದ್ದರು.