


ಡೈಲಿ ವಾರ್ತೆ: 18/ಆಗಸ್ಟ್/ 2025


ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನಿಸುದರ ಮೂಲಕ ವಿಶ್ವ ಛಾಯಾಗ್ರಹಣ ದಿನಾಚರಣೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ದ-ಕ,ಉಡುಪಿ.ಕುಂದಾಪುರ, ಬೈಂದೂರು ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಲಯದ ಹಿರಿಯ ಛಾಯಾಗ್ರಾಹಕರಾದ ಜಗದೀಶ್ ಕಾಯ್ಕಿಣಿ, ಜಾರ್ಜ್ ಡೆಸಾ,ಶ್ರೀಧರ ಹೆಗ್ಡೆ ಇವರನ್ನು ಸನ್ಮಾನಿಸುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ,ಬೈಂದೂರು ವಲಯದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ವಹಿದಿದ್ದರು.
ಈ ಸಂದರ್ಭದಲ್ಲಿಪದ್ಮಪ್ರಸಾದ್ ಜೈನ್ skpa ಜಿಲ್ಲಾಧ್ಯಕ್ಷರು,ದಯಾನಂದ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ವಿಠಲ ಚೌಟ ಮಾಜಿ ಜಿಲ್ಲಾಸಂಚಾಲಕ,ಪ್ರವೀಣ್ ಕೊರಿಯಾ ಜಿಲ್ಲಾ ಉಪಾಧ್ಯಕ್ಷ,ಭರದ್ವಜ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ,ನಾಗರಾಜ್ ರಾಯಪ್ಪನಮಠ,ದಿನೇಶ್ ಗೋಡೆ ಸಲಹಾ ಸಮಿತಿ ಅಧ್ಯಕ್ಷರು,ಬಾಲಕೃಷ್ಣ ಶೆಟ್ಟಿ ನಿಯೋಜಿತ ಅಧ್ಯಕ್ಷರು
ಹರೀಶ್ ಪೂಜಾರಿ ಕೋಶಾಧಿಕಾರಿ, ದಿನೇಶ್ ರಾಯಪ್ಪನ ಮಠ ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ರಾಘ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು